Bengaluru, Jan. 25: A session on the importance of daily routine to maintain health and improve immunity was organized for mothers by Matrubharathi Samiti herein Rashtrotthana Vidya Kendra- Banashankari. Dr. Suvarnini Konale, a doctor at Rashtrotthana Hospital, participated as a resource person in the program. Dr. Suvarnini Konle gave information to the mothers about what our diet should be for good health and what kind of lifestyle we should adopt with many examples. Many mothers participated in the program and took advantage of the program.
ಬೆಂಗಳೂರು, ಜ. 25: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ- ಬನಶಂಕರಿಯಲ್ಲಿ ಮಾತೃಭಾರತಿ ಸಮಿತಿಯ ಮಾತೆಯರಿಗಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ದೈನಂದಿನ ದಿನಚರಿಯ ಪ್ರಾಮುಖ್ಯತೆ ಎಂಬ ಅವಧಿಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ. ಸುವರ್ಣಿನಿ ಕೊಣಾಲೆಯವರು ಭಾಗವಹಿಸಿದ್ದರು. ಉತ್ತಮ ಆರೋಗ್ಯಕ್ಕಾಗಿ ನಮ್ಮ ಆಹಾರ ಪದ್ಧತಿ ಹೇಗಿರಬೇಕು ಯಾವ ರೀತಿಯ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು ಎಂಬ ಮಾಹಿತಿಯನ್ನು ಅನೇಕ ಉದಾಹರಣೆಗಳ ಸಹಿತ ಮಾತೆಯರಿಗೆ ಮನದಟ್ಟು ಮಾಡಿದರು. ಅನೇಕ ಮಾತೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.