Bengaluru, Mar. 14: The festival of colours, Holi, was celebrated herein Rashtrotthana Vidya Kendra – Banashankari. The students were dressed in colourful clothes. The program began with the burning of Holika Devi. The students explained the background and rituals of Holi in detail. Holi or Kamana Habba is celebrated on the full moon day of the Shukla Paksha of the month of Phalguna. This is a festival that marks the end of winter and the arrival of spring. Holi is celebrated with great enthusiasm by everyone from children to adults on the day. The students said that the burning of Holika Devi is special in this festival and explained the importance of this day. The students also sang a group song about Holi. Then all the students performed a group dance about Holi. Principal Smt. Purnima, Vice Principals Smt. Nanda and Smt. Sandhya and the school Head participated in the Holika Dahan and then offered prayers at the pole prepared for breaking the pot. A Holi programme was held in the school grounds in two sessions for students of classes 1 to 12 and for Tapas students. Gokulam students celebrated Holi by playing Holi and breaking the pot. A pot breaking ceremony was held for students of four Vahines, Tapas students and teaching and non-teaching staff. Students and teachers played Holi with organic colours.
ಬೆಂಗಳೂರು, ಮಾ. 14: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಬಣ್ಣಗಳ ಹಬ್ಬ ಹೋಳಿಹಬ್ಬವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ರಂಗುರಂಗಿನ ಉಡುಗೆ ತೊಟ್ಟಿದ್ದರು.ಕಾರ್ಯಕ್ರಮವು ಹೋಲಿಕಾ ದಹನದೊಂದಿಗೆ ಆರಂಭವಾಯಿತು. ಹೋಳಿ ಹಬ್ಬದ ಹಿನ್ನೆಲೆ, ಆಚರಣೆ ಇವೆಲ್ಲವನ್ನು ವಿದ್ಯಾರ್ಥಿಗಳು ಸವಿವರವಾಗಿ ತಿಳಿಸಿದರು. ಫಾಲ್ಗುಣ ಮಾಸದ ಶುಕ್ಲ ಪಕ್ಷದ ಪೂರ್ಣಿಮೆಯಂದು ಹೋಳಿಹಬ್ಬ ಅಥವಾ ಕಾಮನಹಬ್ಬವನ್ನು ಆಚರಿಸುತ್ತೇವೆ. ಇದು ಚಳಿಗಾಲದ ಕೊನೆಯನ್ನು ವಸಂತದ ಆಗಮನವನ್ನು ಸಾರುವ ಹಬ್ಬವಾಗಿದೆ. ಹೋಳಿ ಹಬ್ಬವನ್ನು ದಿನದಂದು ಮಕ್ಕಳಿಂದ ದೊಡ್ಡವರ ತನಕ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಈ ಹಬ್ಬದ ಆಚರಣೆಯಲ್ಲಿ ಹೋಲಿಕಾ ದಹನವು ವಿಶೇಷವಾಗಿದೆ ಎನ್ನುತ್ತಾ ವಿದ್ಯಾರ್ಥಿಗಳು ಈ ದಿನದ ಮಹತ್ವವನ್ನು ತಿಳಿಸಿದರು. ಹಾಗೆಯೇ ಹೋಳಿ ಹಬ್ಬದ ಕುರಿತಾದ ಸಮೂಹ ಗೀತೆಯನ್ನು ವಿದ್ಯಾರ್ಥಿಗಳು ಹಾಡಿದರು. ನಂತರ ಹೋಳಿ ಹಬ್ಬದ ಕುರಿತಾಗಿ ವಿದ್ಯಾರ್ಥಿಗಳೆಲ್ಲರೂ ಸಮೂಹ ನೃತ್ಯ ಪ್ರದರ್ಶಿಸಿದರು. ಪ್ರಧಾನಾಚಾರ್ಯರಾದ ಶ್ರೀಮತಿ ಪೂರ್ಣಿಮಾ, ಉಪ ಪ್ರಧಾನಾಚಾರ್ಯರಾದ ಶ್ರೀಮತಿ ನಂದ ಹಾಗೂ ಶ್ರೀಮತಿ ಸಂಧ್ಯಾ ಅವರು ಮತ್ತು ಶಾಲಾ ಪ್ರಮುಖರು ಹೋಲಿಕಾದ ದಹನದಲ್ಲಿ ಪಾಲ್ಗೊಂಡು ಆಮೇಲೆ ಮಡಿಕೆ ಒಡೆಯಲು ಸಿದ್ಧಪಡಿಸಿದ್ದ ಕಂಬಕ್ಕೆ ಪೂಜೆ ಸಲ್ಲಿಸಿದರು. 1 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಮತ್ತು ತಪಸ್ ವಿದ್ಯಾರ್ಥಿಗಳಿಗಾಗಿ ಶಾಲಾ ಮೈದಾನದಲ್ಲಿ ಎರಡು ಅವಧಿಗಳಲ್ಲಿ ಹೋಳಿ ಕಾರ್ಯಕ್ರಮ ನಡೆಸಲಾಯಿತು. ಗೋಕುಲಂ ವಿದ್ಯಾರ್ಥಿಗಳು ಹೋಳಿ ಆಡಿದರು ಮತ್ತು ಮಡಕೆ ಒಡೆಯುವ ಮೂಲಕ ಹೋಳಿ ಹಬ್ಬವನ್ನು ಆಚರಿಸಿದರು. ನಾಲ್ಕು ವಾಹಿನಿಗಳ ವಿದ್ಯಾರ್ಥಿಗಳು, ತಪಸ್ ವಿದ್ಯಾರ್ಥಿಗಳು ಮತ್ತು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಮಡಕೆ ಒಡೆಯುವ ಸಮಾರಂಭವನ್ನು ನಡೆಸಲಾಯಿತು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸಾವಯವ ಬಣ್ಣಗಳೊಂದಿಗೆ ಹೋಳಿ ಆಡಿದರು.