Inauguration of Matrubharati Committee (2024-25) in RVK – Banashankari

Bengaluru, Sept 16: The inauguration ceremony of the Matrubharati Committee for the current academic year was held herein Rashtrotthana Vidya Kendra – Banashankari. The principal, Smt. Poornima addressed the mothers, offering them guidance. During the event, the committee members for this academic year were elected and assumed their roles.As part of the event, a video showcasing the life and achievements of Ahilyabai Holkar was presented to the mothers, raising awareness about women’s empowerment. Additionally, there was a discussion about activities that could be conducted at the school in the coming days. The mothers were encouraged to actively participate in all the programs. A total of 29 mothers participated in the event.

ಬೆಂಗಳೂರು, ಸಪ್ಟೆಂಬರ್ 16: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದ ಮಾತೃಭಾರತಿ ಸಮಿತಿಯ ಉದ್ಘಾಟನಾ ಸಮಾರಂಭವನ್ನು ನೆರವೇರಿಸಲಾಯಿತು. ಪ್ರಧಾನಚಾರ್ಯರಾದ ಶ್ರೀಮತಿ ಪೂರ್ಣಿಮಾ ಅವರು ಮಾತೆಯರನ್ನು ಉದ್ದೇಶಿಸಿ ಮಾರ್ಗದರ್ಶನದ ಮಾತುಗಳನ್ನಾಡಿದರು. ಜೊತೆಗೆ ಈ ವರ್ಷದ ಶೈಕ್ಷಣಿಕ ಸಾಲಿಗೆ ಮಾತೃಭಾರತಿಯ ಮಾತೆಯರನ್ನು ಪದಾಧಿಕಾರಿಗಳನ್ನಾಗಿ ಆರಿಸಿ ಪದಗ್ರಹಣ ಮಾಡಲಾಯಿತು. ಈ ವರ್ಷದ ಯೋಜನೆಯಂತೆ ಅಹಲ್ಯಾಬಾಯಿ ಹೋಳ್ಕರ್ ಅವರ ಜೀವನ, ಸಾಧನೆಯ ಬಗೆಗಿನ ವಿಡಿಯೋವನ್ನು ಮಾತೆಯರಿಗೆ ತೋರಿಸುವ ಮೂಲಕ ಅವರೆಲ್ಲರಿಗೂ ಮಹಿಳಾ ಸಾಮರ್ಥ್ಯದ ಬಗ್ಗೆ ಅರಿವು ಮೂಡಿಸಲಾಯಿತು. ಜೊತೆಗೆ ಮುಂಬರುವ ದಿನಗಳಲ್ಲಿ ಶಾಲೆಯಲ್ಲಿ ನಡೆಸಬಹುದಾದ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು. ಮಾತೆಯರು ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಈ ಮೂಲಕ ಅವರನ್ನು ಪ್ರೋತ್ಸಾಹಿಸಲಾಯಿತು. ಕಾರ್ಯಕ್ರಮದಲ್ಲಿ ಒಟ್ಟು 29 ಜನ ಮಾತೆಯರು ಭಾಗವಹಿಸಿದ್ದರು.

Scroll to Top