“Soldiers need to maintain physical and mental stability. Today’s students need to know history”: Captain Lata. Bengaluru, Aug 15: The 78th Independence Day was celebrated herein Rashtrotthana Vidya Kendra – Banashankari. Honourable Army veteran and former APAC Security Leader,Captain Latha graced the program.The guests were welcomed by the Ghosh team of the school. The program started with Deepa Prajwalane & Pushparchane. The chief guests hoisted the flag. Later, a march was conducted under the leadership of school student leaders and Vahini leaders. After watching this the chief guest in her speech remembered many leaders who fought for freedom. Also talked about the hardships and efforts of our country’s soldiers. The students talked about the good qualities they should imbibe in themselves.
On this occasion, dignitaries released the School Journal, ‘Ankura’ for the year 2023-24.Pratibha Puraskar was awarded on this occasion to the students who secured the highest marks in the annual examinations of the previous year. Birthdays of Sangolli Rayanna and Maharshi Aurobindo, who had a unique position in the freedom struggle, were also celebrated. Children introduced their achievements. Selected children from different classes performed cultural programs like song, dance, drama, yoga performance.
“ಸೈನಿಕರು ದೈಹಿಕ ಮತ್ತು ಮಾನಸಿಕ ಸ್ಥಿರತೆಯನ್ನು ಕಾಯ್ದುಕೊಳ್ಳಬೇಕಾದ ಅವಶ್ಯಕತೆ ಇದೆ. ಇಂದಿನ ವಿದ್ಯಾರ್ಥಿಗಳು ಇತಿಹಾಸವನ್ನು ತಿಳಿದುಕೊಳ್ಳಬೇಕು”: ಕ್ಯಾಪ್ಟನ್ ಲತಾ: ಸ್ವಾತಂತ್ರ್ಯ ದಿನಾಚರಣೆ, ಆರ್.ವಿ.ಕೆ. – ಬನಶಂಕರಿ.ಬೆಂಗಳೂರು, ಆಗಸ್ಟ್ 15: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಗೌರವಾನ್ವಿತ ಸೇನಾ ಯೋಧರು ಮತ್ತು ಮಾಜಿ APAC ಭದ್ರತಾ ನಾಯಕಿ, ಕ್ಯಾಪ್ಟನ್ ಲತಾ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.ಅತಿಥಿಗಳನ್ನು ಶಾಲೆಯ ಘೋಷ್ ತಂಡವು ಸ್ವಾಗತಿಸಿತು. ದೀಪಪ್ರಜ್ವಲನೆ ಹಾಗೂ ಪುಷ್ಪಾರ್ಚನೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಮುಖ್ಯ ಅತಿಥಿಗಳು ಧ್ವಜಾರೋಹಣ ಮಾಡಿದರು. ನಂತರ ಶಾಲಾ ವಿದ್ಯಾರ್ಥಿ ನಾಯಕರು ಹಾಗೂ ವಾಹಿನಿ ಪ್ರಮುಖರ ನೇತೃತ್ವದಲ್ಲಿ ಪಥಸಂಚಲನವನ್ನು ನಡೆಸಲಾಯಿತು. ಇದನ್ನು ವೀಕ್ಷಿಸಿದ ನಂತರ ಮುಖ್ಯ ಅತಿಥಿಗಳು ತಮ್ಮ ಭಾಷಣದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅನೇಕ ನಾಯಕರನ್ನು ಸ್ಮರಿಸಿಕೊಂಡರು. ಹಾಗೆಯೇ ನಮ್ಮ ದೇಶದ ಸೈನಿಕರು ಪಡುತ್ತಿರುವ ಕಷ್ಟ, ಶ್ರಮಗಳ ಕುರಿತು ಮಾತನಾಡಿದರು. ವಿದ್ಯಾರ್ಥಿಗಳು ತಮ್ಮಲ್ಲಿ ಅಳವಡಿಸಿಕೊಳ್ಳಬೇಕಾದ ಉತ್ತಮ ಗುಣಗಳ ಬಗ್ಗೆ ಹೇಳಿದರು.
ಈ ಸಂದರ್ಭದಲ್ಲಿ 2023-24ನೇ ಸಾಲಿನ ಶಾಲಾ ಪುರವಣಿ, ‘ಅಂಕುರ’ವನ್ನು ಗಣ್ಯರು ಬಿಡುಗಡೆಗೊಳಿಸಿದರು. ಹಿಂದಿನ ವರ್ಷದ ವಾರ್ಷಿಕ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.ಸ್ವಾತಂತ್ರ್ಯ ಹೋರಾಟದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಸಂಗೊಳ್ಳಿ ರಾಯಣ್ಣ ಹಾಗೂ ಮಹರ್ಷಿ ಅರವಿಂದರ ಜನ್ಮದಿನವನ್ನೂ ಆಚರಿಸಲಾಯಿತು. ಮಕ್ಕಳು ಅವರ ಸಾಧನೆಯನ್ನು ಪರಿಚಯಿಸಿದರು. ವಿವಿಧ ತರಗತಿಗಳ ಆಯ್ದ ಮಕ್ಕಳು ಹಾಡು, ನೃತ್ಯ, ನಾಟಕ, ಯೋಗ ಪ್ರದರ್ಶನ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.