Bengaluru, Mar. 11: An inter-school yoga competition was organized for government school children under the Seva Prakalpa herein Rashtrotthana Vidya Kendra – Banashankari. After lighting the lamp, Sri Kumaraswamy H. A., Head of Kengeri Cluster, spoke and appreciated the excellent service activities being done by Rashtrotthana Vidya Kendra in the schools in Kengeri Cluster. He mentioned that many students have been benefited due to the service activities being carried out through this school. Sri Vasanth Kumar, the school correspondent, gave the introductory speech and informed everyone about the service spirit behind teaching yoga and other activities to government school students, and about the service activities being carried out through our school. A total of 112 students and nine teachers from eight government schools participated in the program. All the students participated in the competition by demonstrating the yoga postures they had learnt so far. Speaking while distributing the prizes to the winning students, the Principal, Smt. Purnima, said that it is important to participate naturally in the competition, whether it is a win or a loss. All the students who participated in the competition were honoured with a certificate of appreciation and a lunch box, and all the participating schools were honoured with a trophy.
ಬೆಂಗಳೂರು, ಮಾ. 11: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಸೇವಾ ಪ್ರಕಲ್ಪದ ಅಡಿಯಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಅಂತರ್ ಶಾಲಾ ಯೋಗಾಸನ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಕೆಂಗೇರಿ ಕ್ಲಸ್ಟರ್ ನ ಮುಖ್ಯಸ್ಥರಾದ ಶ್ರೀ ಕುಮಾರಸ್ವಾಮಿ ಎಚ್. ಎ. ಅವರು ದೀಪ ಬೆಳಗಿಸಿ ಬಳಿಕ ಮಾತನಾಡುತ್ತಾ ಕೆಂಗೇರಿ ಕ್ಲಸ್ಟರ್-ನಲ್ಲಿ ಇರುವ ಶಾಲೆಗಳಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರವು ಬಹಳ ಉತ್ತಮವಾಗಿ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದನ್ನು ಶ್ಲಾಘಿಸಿದರು. ಶಾಲೆಯ ಮೂಲಕ ನಡೆಯುತ್ತಿರುವ ಸೇವಾ ಚಟುವಟಿಕೆಗಳಿಂದಾಗಿ ಅನೇಕ ವಿದ್ಯಾರ್ಥಿಗಳು ಫಲಾನುಭವಿಗಳಾಗಿರುವುದನ್ನು ಉಲ್ಲೇಖಿಸಿದರು. ಶಾಲೆಯ ಕರೆಸ್ಪಾಂಡೆಂಟ್ ಆಗಿರುವ ಶ್ರೀ ವಸಂತ್ ಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಯೋಗಾಸನ ಮತ್ತು ಇತರ ಚಟುವಟಿಕೆಗಳನ್ನು ಹೇಳಿಕೊಡುವ ಹೇಳಿಕೊಡುವುದರ ಹಿಂದಿನ ಸೇವಾ ಮನೋಭಾವದ ಬಗ್ಗೆ, ಹಾಗೂ ಶಾಲೆಯ ಮೂಲಕ ನಡೆಯುತ್ತಿರುವ ಸೇವಾ ಚಟುವಟಿಕೆಗಳ ಬಗ್ಗೆ ಎಲ್ಲರಿಗೂ ತಿಳಿಯಪಡಿಸಿದರು. ಕಾರ್ಯಕ್ರಮದಲ್ಲಿ ಒಟ್ಟು ಎಂಟು ಸರ್ಕಾರಿ ಶಾಲೆಯ 112 ವಿದ್ಯಾರ್ಥಿಗಳು ಮತ್ತು ಒಂಬತ್ತು ಜನ ಶಿಕ್ಷಕರು ಭಾಗವಹಿಸಿದ್ದರು. ವಿದ್ಯಾರ್ಥಿಗಳೆಲ್ಲರೂ ತಾವು ಈವರೆಗೆ ಕಲಿತ ಯೋಗಾಸನವನ್ನು ಪ್ರದರ್ಶಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದರು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸುತ್ತಾ ಮಾತನಾಡಿದ ಪ್ರಧಾನ ಆಚಾರ್ಯರಾದ ಶ್ರೀಮತಿ ಪೂರ್ಣಿಮಾ ಅವರು ಸ್ಪರ್ಧೆಯಲ್ಲಿ ಸೋಲು ಗೆಲವು ಸಹಜ ಭಾಗವಹಿಸುವಿಕೆ ಮುಖ್ಯ ಎಂದು ವಿದ್ಯಾರ್ಥಿಗಳಿಗೆ ಹಿತವಚನವನ್ನು ಹೇಳಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಶಂಸನಾ ಪತ್ರ ಮತ್ತು ಒಂದು ಊಟದ ಡಬ್ಬಿಯನ್ನು, ಭಾಗವಹಿಸಿದ ಎಲ್ಲಾ ಶಾಲೆಗಳಿಗೂ ಟ್ರೋಫಿಯನ್ನು ನೀಡಿ ಗೌರವಿಸಲಾಯಿತು.