International Yoga Day Celebration in RVK – Banashankari

Bengaluru, June 21: International Yoga Day was celebrated herein Rashtrotthana Vidya Kendra – Banashankari under the theme ‘Yoga for One Land, One Health’. Sri Madhav Madanapalli, Treasurer of Indian Yoga Association graced the program. The Guests spoke about the benefits of yoga and how yoga is important in daily life. Selected students started the program by singing the Yoga Geeta melodiously. On this occasion, Smt. Nanda, the Principal of our school, taught everyone the Sankalpa. The students of the surrounding government schools and our school who came to the program performed various yoga asanas. Pranav Nadig, a student of class 8, who won the Asian Yoga Association competition, was honoured. Similarly, students selected for the national level, Shashir Bharadwaj, Manaswini, Avani, Sravani were honoured. Then a mass yoga demonstration was held. The teachers of the government schools who attended the program were honoured with mementos.

ಬೆಂಗಳೂರು, ಜೂ. 21: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ‘ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ’ ಎಂಬ ಧ್ಯೇಯವಾಕ್ಯದಡಿಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಇಂಡಿಯನ್ ಯೋಗ ಅಸೋಸಿಯೇಶನ್ ನ ಖಜಾಂಚಿಯಾಗಿರುವ ಶ್ರೀ ಮಾಧವ ಮದನಪಲ್ಲಿಯವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅತಿಥಿಗಳು ಮಾತನಾಡುತ್ತಾ ಯೋಗದ ಉಪಯೋಗ ಮತ್ತು ದಿನನಿತ್ಯ ಜೀವನದಲ್ಲಿ ಯೋಗವು ಹೇಗೆ ಮಹತ್ವಪೂರ್ಣವಾಗಿದೆ ಎಂಬುದನ್ನು ತಿಳಿಸಿದರು. ಆಯ್ದ ವಿದ್ಯಾರ್ಥಿಗಳು ಯೋಗ ಗೀತೆಯನ್ನು ಹಾಡುತ್ತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಮ್ಮ ಶಾಲೆಯ ಪ್ರಧಾನಾಚಾರ್ಯರಾದ ಶ್ರೀಮತಿ ನಂದ ಅವರು ಎಲ್ಲರಿಗೂ ಸಂಕಲ್ಪವನ್ನು ಬೋಧಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಸುತ್ತಮುತ್ತಲಿನ ಸರ್ಕಾರೀ ಶಾಲೆಯ ವಿದ್ಯಾರ್ಥಿಗಳು ಹಾಗೂ ನಮ್ಮ ಶಾಲೆಯ ವಿದ್ಯಾರ್ಥಿಗಳು ಯೋಗದ ಬೇರೆ ಬೇರೆ ಆಸನಗಳನ್ನು ಪ್ರದರ್ಶಿಸಿದರು. ಏಷಿಯನ್ ಯೋಗ ಅಸೋಸಿಯೇಷನ್ ಸ್ಪರ್ಧೆಯಲ್ಲಿ ವಿಜೇತರಾದ 8ನೇ ತರಗತಿಯ ವಿದ್ಯಾರ್ಥಿ ಪ್ರಣವ್ ನಾಡಿಗ್ ರನ್ನು ಸನ್ಮಾನಿಸಲಾಯಿತು. ಹಾಗೆಯೇ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಶಿಶಿರ್ ಭಾರದ್ವಾಜ್, ಮನಸ್ವಿನಿ, ಅವನಿ, ಶ್ರಾವಣಿ ಈ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ನಂತರ ಸಾಮೂಹಿಕ ಯೋಗ ಪ್ರದರ್ಶನವನ್ನು ನಡೆಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಸರ್ಕಾರಿ ಶಾಲೆಯ ಶಿಕ್ಷಕರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.

Scroll to Top