Kreedotsava in RVK- Banashankari

Bengaluru, Jan. 17: An annual sports event ‘Kreedotsava’ was organized for children of classes 6 to 12 herein Rashtrotthana Vidya Kendra – Banashankari. Sri Shashank Achar, founder of Agrata Sport Group and shuttle badminton player, was present as the chief guest. Sri Shashank Achar hoisted the school flag and saluted the school. Along with the headmistress and vice-headmistress, other leaders and students marched according to the channel. Later, the students who won various sports competitions lit the sports torch. Purnima, the principal read the pledge and all the children accepted the pledge. Sri Shashank Achar said about the students that, sports is a part of our life. Games are helpful for our mental health and physical health. Let us all play for the country. He encouraged the students to become players who will proudly raise the flag of our country in front of millions of people. He said that those who are studying in Rashtrotthana school should be proud of studying in a school that provides good culture. He also told the students to respect teachers and parents. Students from classes 6 to 12 participated in various competitions held at the sports festival. Winners of various competitions were awarded mementos as a token of victory. Atula Vahini was declared as the winning Vahini.

ಬೆಂಗಳೂರು, ಜ. 17: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ 6ರಿಂದ 12ನೇ ತರಗತಿಯ ಮಕ್ಕಳಿಗೆ ‘ಕ್ರೀಡೋತ್ಸವ’ ವಾರ್ಷಿಕ ಕ್ರೀಡಾಕೂಟವನ್ನು ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಅಗ್ರತಾ ಕ್ರೀಡಾ ಗ್ರೂಪ್ ಸ್ಥಾಪಕರೂ, ಶಟಲ್ ಬ್ಯಾಡ್ಮಿಂಟನ್ ಆಟಗಾರರೂ ಆದ ಶ್ರೀ ಶಶಾಂಕ್ ಆಚಾರ್ ಅವರು ಆಗಮಿಸಿದ್ದರು. ಶ್ರೀ ಶಶಾಂಕ್ ಆಚಾರ್ ಅವರು ಶಾಲೆಯ ದ್ವಜವನ್ನು ಆರೋಹಣ ಮಾಡಿ ಧ್ವಜವಂದನೆ ಮಾಡಿದರು. ಶಾಲಾನಾಯಕ ಹಾಗೂ ಉಪನಾಯಕಿಯ ಸಂಗಡ ಇತರ ನಾಯಕರು ಮತ್ತು ವಾಹಿನಿ ಪ್ರಕಾರ ವಿದ್ಯಾರ್ಥಿಗಳು ಪಥ ಸಂಚಲನ ಮಾಡಿದರು. ಬಳಿಕ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾಗಿ ಶಾಲೆಯ ಕೀರ್ತಿ ಬೆಳಗಿದ ವಿದ್ಯಾರ್ಥಿಗಳು ಕ್ರೀಡಾ ಜ್ಯೋತಿಯನ್ನು ಬೆಳಗಿದರು. ಪ್ರಧಾನಾಚಾರ್ಯರಾದ ಪೂರ್ಣಿಮಾ ಅವರು ಪ್ರತಿಜ್ಞಾವಿಧಿಯನ್ನು ಓದುವುದರ ಮೂಲಕ ಮಕ್ಕಳೆಲ್ಲರೂ ಪ್ರತಿಜ್ಞಾ ಸ್ವೀಕಾರ ಮಾಡಿದರು. ಶ್ರೀ ಶಶಾಂಕ್ ಆಚಾರ್ ರವರು ವಿದ್ಯಾರ್ಥಿಗಳ ಕುರಿತು ಮಾತನಾಡುತ್ತಾ ಕ್ರೀಡೆ ಎನ್ನುವುದು ನಮ್ಮ ಜೀವನದ ಒಂದು ಭಾಗ. ನಮ್ಮ ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯಕ್ಕೆ ಆಟಗಳು ಸಹಕಾರಿ. ನಾವೆಲ್ಲರೂ ದೇಶಕ್ಕಾಗಿ ಆಡೋಣ. ಲಕ್ಷಾಂತರ ಜನರ ಮುಂದೆ ನಮ್ಮ ದೇಶದ ಬಾವುಟವನ್ನು ಹೆಮ್ಮೆಯಿಂದ ಎತ್ತಿ ಹಿಡಿಯುವ ಆಟಗಾರರಾಗೋಣ ಎಂದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ರಾಷ್ಟ್ರೋತ್ಥಾನದಂತಹ ಉತ್ತಮ ಸಂಸ್ಕಾರವನ್ನು ನೀಡುವ ಶಾಲೆಯಲ್ಲಿ ಕಲಿಯುತ್ತಿರುವುದಕ್ಕಾಗಿ ಹೆಮ್ಮೆ ಪಡಬೇಕು ಎಂದರು. ಹಾಗೆಯೇ ಶಿಕ್ಷಕರನ್ನು, ತಂದೆ ತಾಯಿಯರನ್ನು ಗೌರವಿಸಿ ಎಂಬ ಹಿತ ನುಡಿಗಳನ್ನು ವಿದ್ಯಾರ್ಥಿಗಳಿಗೆ ಹೇಳಿದರು. ಕ್ರೀಡೋತ್ಸವದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ 6 ರಿಂದ 12ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಪಾಲ್ಗೊಂಡರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ವಿಜಯದ ಸಂಕೇತವಾದ ಸ್ಮರಣಿಕೆಗಳನ್ನು ನೀಡಲಾಯಿತು. ಅತುಲ ವಾಹಿನಿಯು ವಿಜೇತ ವಾಹಿನಿ ಎಂದು ಘೋಷಿಸಲಾಯಿತು.

Scroll to Top