Bengaluru, Feb. 22: Sports festival program for classes 1 and 2 was organized at Rashtrotthana Vidya Kendra – Banashankari. The guests of the program were Smt. Uma S. Patil, Principal of Rashtrotthana Vidya Kendra – Hassan. The program began with the hymns of Lord Ganesha and lighting of the sports lamp. The procession of students of classes 1 and 2 and Ghosh was beautiful. The children of class 1 presented an umbrella display. The Chief Guest addressed the program and shared his memories of his school life. And addressed the children, she spoke about the words of Swami Vivekananda and the discipline and devotion can be instilled in the nerves of children only through games. The Guests and the Principal launched various sports by releasing balloons into the sky.
ಬೆಂಗಳೂರು, ಫೆ. 22: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ 1 ಮತ್ತು 2 ನೇ ತರಗತಿಯ ಕ್ರೀಡೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ಹಾಸನದ ಪ್ರಧಾನಾಚಾರ್ಯರಾದ ಶ್ರೀಮತಿ ಉಮಾ ಎಸ್ . ಪಾಟೀಲ್ ರವರು ಆಗಮಿಸಿದ್ದರು. ಗಣೇಶನ ಸ್ತುತಿಯೊಂದಿಗೆ ಹಾಗೂ ಕ್ರೀಡಾ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು. 1 ಮತ್ತು 2ನೇ ತರಗತಿಯ ವಿದ್ಯಾರ್ಥಿಗಳು ಹಾಗೂ ಘೋಷ್ ನ ಪಥಸಂಚಲನವು ಸೊಗಸಾಗಿ ಮೂಡಿಬಂದಿತ್ತು. 1 ನೇ ತರಗತಿಯ ಮಕ್ಕಳು ಅಂಬ್ರೆಲಾ ಡಿಸ್ಪ್ಲೇ ಪ್ರದರ್ಶಿಸಿದರು. ಮುಖ್ಯ ಅತಿಥಿಗಳು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ತಮ್ಮ ಶಾಲಾ ಜೀವನದ ನೆನಪನ್ನು ಹಂಚಿಕೊಂಡರು. ಹಾಗೂ ಮಕ್ಕಳನ್ನು ಉದ್ದೇಶಿಸಿ ಸ್ವಾಮಿ ವಿವೇಕಾನಂದರ ಸುಭಾಷಿತ ಹಾಗೂ ಮಕ್ಕಳಲ್ಲಿ ಶಿಸ್ತು ಮತ್ತು ಶ್ರದ್ಧೆ ಬೆಳೆಸುವುದು ಆಟದಿಂದ ಮಾತ್ರ ಸಾಧ್ಯ ಎಂಬ ಕಿವಿ ಮಾತನ್ನು ಹೇಳಿದರು. ಅತಿಥಿಗಳು ಹಾಗೂ ಪ್ರಧಾನಾಚಾರ್ಯರು ಬಲೂನನ್ನು ಆಕಾಶದೆತ್ತರಕ್ಕೆ ಬಿಡುವುದರ ಮೂಲಕ ವಿವಿಧ ಕ್ರೀಡೆಗಳಿಗೆ ಚಾಲನೆಯನ್ನು ನೀಡಿದರು.