Bengaluru, Feb 25: Mahashivratri festival was celebrated herein Rashtrotthana Vidya Kendra – Banashankari. The school’s Sanskrit teachers performed worship to Lord Shiva. In addition, the music teachers and students of the choir performed Shiva’s bhajan. After the worship, the students explained the importance of the Shivaratri celebration. Shivaratri is one of the most important festivals of Hindus. This festival is celebrated on the Bahula Chaturdashi of the month of Magha. Generally, during all festivals, worship is done to the god during the day. But Shivaratri is a special celebration where worship and bhajan are done at night. Night means darkness, and darkness means ignorance. Shivaratri is an auspicious day to pray to that Shiva to dispel ignorance and illuminate knowledge. It is believed that Shiva travels where ignorance is full and lights the lamp of knowledge. Then the students sang a melodious song of Shiva and rendered vocal service and dance service. The students were made aware of the Satsang program being conducted by Kutumb Prabodhan on the occasion of Shivaratri. The children were made aware of the idea of performing Bhajans and performing Pooja on the day of Shivaratri in our own homes, if possible, by involving our neighbors, and also of spreading the good idea of Pancha Parivarman organized by the RSS to more people through this.
ಬೆಂಗಳೂರು, ಫೆ. 25: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಮಹಾಶಿವರಾತ್ರಿ ಹಬ್ಬವನ್ನು ಆಚರಿಸಲಾಯಿತು. ಶಾಲಾ ಶಿವನಿಗೆ ಪೂಜೆಯನ್ನು ಶಾಲೆಯ ಸಂಸ್ಕೃತ ಶಿಕ್ಷಕರು ನೆರವೇರಿಸಿದರು. ಜೊತೆಗೆ ಸಂಗೀತ ಶಿಕ್ಷಕರು ಹಾಗೂ ಗಾಯನ ವೃಂದದ ವಿದ್ಯಾರ್ಥಿಗಳು ಶಿವನ ಭಜನೆಯನ್ನು ನೆರವೇರಿಸಿದರು. ಪೂಜೆಯ ನಂತರ ವಿದ್ಯಾರ್ಥಿಗಳು ಶಿವರಾತ್ರಿ ಆಚರಣೆಯ ಮಹತ್ವವನ್ನು ತಿಳಿಸಿದರು. ಶಿವರಾತ್ರಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದು. ಈ ಹಬ್ಬವನ್ನು ಮಾಘ ಮಾಸದ ಬಹುಳ ಚತುರ್ದಶಿಯಂದು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಎಲ್ಲ ಹಬ್ಬಗಳಲ್ಲಿಯೂ ದೇವರಿಗೆ ಹಗಲು ಪೂಜೆ ನಡೆಯುತ್ತದೆ. ಆದರೆ ಶಿವರಾತ್ರಿ ಮಾತ್ರ ರಾತ್ರಿಯ ಹೊತ್ತು ಪೂಜೆ, ಭಜನೆ ನಡೆಸುವ ವಿಶೇಷ ಆಚರಣೆ. ರಾತ್ರಿ ಎಂದರೆ ಕತ್ತಲು, ಕತ್ತಲು ಎಂದರೆ ಅಜ್ಞಾನ. ಅಜ್ಞಾನವನ್ನು ಕಳೆದು ಸುಜ್ಞಾನ ಬೆಳಗಿಸು ಎಂದು ಆ ಶಿವನನ್ನು ಬೇಡುವ ಶುಭ ದಿನವೇ ಶಿವರಾತ್ರಿ. ಅಜ್ಞಾನ ತುಂಬಿರುವಲ್ಲಿ ಶಿವ ಸಂಚರಿಸಿ ಜ್ಞಾನ ದೀವಿಗೆಯನ್ನು ಬೆಳಗುತ್ತಾನೆ ಎಂಬ ನಂಬಿಕೆ ಇದೆ ಎಂದು ವಿದ್ಯಾರ್ಥಿಗಳು ತಿಳಿಸಿದರು. ನಂತರ ವಿದ್ಯಾರ್ಥಿಗಳು ಸುಮಧುರವಾಗಿ ಶಿವನ ಹಾಡನ್ನು ಹಾಡಿ ಗಾಯನ ಸೇವೆಯನ್ನು, ನೃತ್ಯದ ಮೂಲಕ ನೃತ್ಯ ಸೇವೆಯನ್ನೂ ಸಲ್ಲಿಸಿದರು. ಶಿವರಾತ್ರಿಯ ಪ್ರಯುಕ್ತ ಕುಟುಂಬ ಪ್ರಬೋಧನ್ ನವರು ನಡೆಸುತ್ತಿರುವ ಸತ್ಸಂಗ ಕಾರ್ಯಕ್ರಮದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು. ನಮ್ಮ ನಮ್ಮ ಮನೆಗಳಲ್ಲಿ, ಸಾಧ್ಯವಾದರೆ ಅಕ್ಕಪಕ್ಕದ ಮನೆಯವರನ್ನು ಸೇರಿಸಿಕೊಂಡು ಶಿವರಾತ್ರಿಯ ದಿನ ಭಜನೆಯನ್ನು ಮಾಡಿ, ಪೂಜೆಯನ್ನು ನೆರವೇರಿಸುವುದು, ಜೊತೆಗೆ ಆರ್ ಎಸ್ ಎಸ್ ನ ವತಿಯಿಂದ ಹಮ್ಮಿಕೊಳ್ಳಲಾದ ಪಂಚ ಪರಿವರ್ತನೆ ಎಂಬ ಉತ್ತಮ ವಿಚಾರವನ್ನು ಹೆಚ್ಚಿನ ಜನರಿಗೆ ಈ ಮೂಲಕ ತಲುಪಿಸಬೇಕು ಎಂಬ ಉದ್ದೇಶವನ್ನು ಮಕ್ಕಳಿಗೆ ಮನದಟ್ಟು ಮಾಡಲಾಯಿತು.