Mother Tongue Day in RVK – Banashankari

Bengaluru, Feb. 21: Mother tongue Day was celebrated herein Rashtrotthana Vidya Kendra- Banashankari. Children spoke about mother tongue in relation to three languages, Sanskrit, Kannada and Hindi. As part of the program, students conducted programs such as storytelling, poetry recitation and interactive discussions by students in their mother tongue. Students discussed the importance of multilingualism and how learning languages, including English, fosters communication and global understanding. Teachers emphasized the need to respect and preserve linguistic diversity. They reinforced the message that language is not just a medium of communication, but a bridge that connects cultures and generations. Language has grown as a medium of communication at every stage of human history. The thoughts, dreams and experiences of every child depend on their mother tongue. Everyone feels excited and proud when they hear their mother tongue. To further enhance this pride, February 21 is celebrated as International Mother tongue Day across the world. UNESCO officially declared this day for the first time in 1999. Through this, it paved the way for preserving and developing our mother tongue, the students said.

ಬೆಂಗಳೂರು, ಫೆ. 21: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಮಾತೃಭಾಷಾ ದಿವಸ ಆಚರಿಸಲಾಯಿತು. ಮಕ್ಕಳು ಸಂಸ್ಕೃತ, ಕನ್ನಡ ಮತ್ತು ಹಿಂದಿ ಈ ಮೂರು ಭಾಷೆಗಳಿಗೆ ಸಂಬಂಧಿಸಿದಂತೆ ಮಾತೃಭಾಷೆಯ ಕುರಿತು ಮಾತನಾಡಿದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ಕಥೆ ಹೇಳುವಿಕೆ, ಕವನ ವಾಚನ ಮತ್ತು ವಿದ್ಯಾರ್ಥಿಗಳು ತಮ್ಮ ಮಾತೃಭಾಷೆಯಲ್ಲಿ ಸಂವಾದಾತ್ಮಕ ಚರ್ಚೆ ಮೊದಲಾದ ಕಾರ್ಯಕ್ರಮಗಳನ್ನು ನಡೆಸಿದರು. ವಿದ್ಯಾರ್ಥಿಗಳು ಬಹುಭಾಷಾವಾದದ ಪ್ರಾಮುಖ್ಯತೆ ಮತ್ತು ಇಂಗ್ಲಿಷ್ ಸೇರಿದಂತೆ ಭಾಷೆಗಳನ್ನು ಕಲಿಯುವುದು ಸಂವಹನ ಮತ್ತು ಜಾಗತಿಕ ತಿಳುವಳಿಕೆಯನ್ನು ಹೇಗೆ ಬೆಳೆಸುತ್ತದೆ ಎಂಬುದರ ಕುರಿತು ಚರ್ಚಿಸಿದರು. ಶಿಕ್ಷಕರು ಭಾಷಾ ವೈವಿಧ್ಯತೆಯನ್ನು ಗೌರವಿಸುವ ಮತ್ತು ಸಂರಕ್ಷಿಸುವ ಅಗತ್ಯವನ್ನು ಒತ್ತಿ ಹೇಳಿದರು. ಭಾಷೆ ಕೇವಲ ಸಂವಹನ ಮಾಧ್ಯಮವಲ್ಲ, ಸಂಸ್ಕೃತಿಗಳು ಮತ್ತು ತಲೆಮಾರುಗಳನ್ನು ಸಂಪರ್ಕಿಸುವ ಸೇತುವೆ ಎಂಬ ಸಂದೇಶವನ್ನು ಬಲಪಡಿಸಿದರು. ಮಾನವನ ಇತಿಹಾಸದ ಬೆಳವಣಿಗೆಯ ಹಂತದಲ್ಲಿ ಭಾಷೆ ಸಂವಹನ ಮಾಧ್ಯಮವಾಗಿ ಬೆಳೆದಿದೆ. ಪ್ರತಿಯೊಂದು ಮಗುವಿನ ಯೋಚನೆಗಳು, ಕನಸುಗಳು, ಅನುಭವಗಳು ಮಾತೃ ಭಾಷೆಯನ್ನೇ ಅವಲಂಬಿಸಿರುತ್ತದೆ. ಪ್ರತಿಯೊಬ್ಬರಿಗೂ ತಮ್ಮ ಮಾತೃಭಾಷೆ ಕೇಳಿದರೆ ರೋಮಾಂಚನ ಸೃಷ್ಟಿಯಾಗಿ, ಅಭಿಮಾನ ಉಕ್ಕಿ ಬರುತ್ತದೆ. ಈ ಅಭಿಮಾನವನ್ನು ಇನ್ನಷ್ಟು ಹೆಚ್ಚುಗೊಳಿಸಲು ಫೆಬ್ರವರಿ 21ನ್ನು ವಿಶ್ವದಾದ್ಯಂತ ಅಂತರಾಷ್ಟ್ರೀಯ ಮಾತೃಭಾಷಾ ದಿನ ಎಂದು ಆಚರಿಸಲಾಗುತ್ತದೆ. ಪ್ರಥಮ ಬಾರಿಗೆ ಯುನೆಸ್ಕೋ 1999 ರಲ್ಲಿ ಈ ದಿನಾಚರಣೆಯನ್ನು ಅಧಿಕೃತವಾಗಿ ಘೋಷಿಸಿತು. ಈ ಮೂಲಕ ನಮ್ಮ ಮಾತೃಭಾಷೆಯನ್ನು ಉಳಿಸಿ ಬೆಳೆಸಲು ರಹದಾರಿಯನ್ನು ಹಾಕಿ ಕೊಟ್ಟಿತು ಎಂದು ವಿದ್ಯಾರ್ಥಿಗಳು ತಿಳಿಸಿದರು.

Scroll to Top