Bengaluru, Jan. 16: National Youth Day was celebrated on the occasion of Vivekananda Jayanti herein Rashtrotthana Vidya Kendra- Banashankari. Students talking about the life of Swami Vivekananda, said, “Swami Vivekananda is one of the most famous spiritual leaders of India. He was a prolific thinker, a great orator and a passionate patriot. He was responsible for the revival of Hindu spirituality and established Hinduism as a revered religion on the world stage. His words are self-improvement goals especially for the youth of the country. It is for this reason that his birthday, January 12, is celebrated as National Youth Day in India,” they said. Then sang a song about Vivekananda. Later, students of class 9 visited classes 1 to 8 and showed a video on the life of Vivekananda to the students of those classes. They also gave information about Vivekananda’s life by asking questions. Saffron Day was celebrated on the occasion of Swami Vivekananda Jayanti at Gokulam. Dressed in saffron attire, the students displayed the saffron colored toys they had brought in the activity room. In addition, selected teachers and students of the school visited other government schools in the vicinity and celebrated Swami Vivekananda’s Jayanti there too and informed the children of that school about the life of Vivekananda.
ಬೆಂಗಳೂರು, ಜ. 16: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ವಿವೇಕಾನಂದ ಜಯಂತಿ ಅಂಗವಾಗಿ ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಜೀವನದ ಕುರಿತು ಮಾತನಾಡುತ್ತ, “ಸ್ವಾಮಿ ವಿವೇಕಾನಂದರು ಭಾರತದ ಅತ್ಯಂತ ಪ್ರಸಿದ್ಧ ಆಧ್ಯಾತ್ಮಿಕ ನಾಯಕರಲ್ಲಿ ಒಬ್ಬರು. ಅವರು ಸಮೃದ್ಧ ಚಿಂತಕ, ಶ್ರೇಷ್ಠ ವಾಗ್ಮಿ ಮತ್ತು ಭಾವೋದ್ರಿಕ್ತ ದೇಶಭಕ್ತರಾಗಿದ್ದರು. ಅವರು ಹಿಂದೂ ಆಧ್ಯಾತ್ಮಿಕತೆಯ ಪುನರುಜ್ಜೀವನಕ್ಕೆ ಕಾರಣರಾಗಿದ್ದರು ಮತ್ತು ವಿಶ್ವ ವೇದಿಕೆಯಲ್ಲಿ ಹಿಂದೂ ಧರ್ಮವನ್ನು ಪೂಜ್ಯ ಧರ್ಮವಾಗಿ ಸ್ಥಾಪಿಸಿದರು. ಅವರ ಮಾತುಗಳು ವಿಶೇಷವಾಗಿ ದೇಶದ ಯುವಕರಿಗೆ ಸ್ವಯಂ ಸುಧಾರಣೆಯ ಗುರಿಗಳಾಗಿವೆ. ಈ ಕಾರಣಕ್ಕಾಗಿಯೇ ಅವರ ಜನ್ಮದಿನವಾದ ಜನವರಿ 12ನ್ನು ಭಾರತದಲ್ಲಿ ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ” ಎಂದು ಹೇಳಿದರು. ನಂತರ ವಿವೇಕಾನಂದರ ಕುರಿತಾದ ಹಾಡನ್ನು ಹಾಡಿದರು. ಬಳಿಕ 9ನೇ ತರಗತಿಯ ವಿದ್ಯಾರ್ಥಿಗಳು ಒಂದರಿಂದ ಎಂಟನೇ ತರಗತಿಗಳಿಗೆ ಭೇಟಿ ನೀಡಿ ಆ ತರಗತಿಯ ವಿದ್ಯಾರ್ಥಿಗಳಿಗೆ ವಿವೇಕಾನಂದರ ಜೀವನದ ಕುರಿತಾದ ವಿಡಿಯೋವನ್ನು ತೋರಿಸಿದರು. ಹಾಗೆಯೇ ಪ್ರಶ್ನೆಗಳನ್ನು ಕೇಳುವ ಮೂಲಕ ವಿವೇಕಾನಂದರ ಜೀವನದ ಬಗ್ಗೆ ಮಾಹಿತಿಯನ್ನು ನೀಡಿದರು. ಗೋಕುಲಮ್ ನಲ್ಲಿ ಸ್ವಾಮಿ ವಿವೇಕಾನಂದ ಜಯಂತಿಯ ಪ್ರಯುಕ್ತ ಕೇಸರಿ ದಿನವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಕೇಸರಿ ಉಡುಪನ್ನು ಧರಿಸಿ, ತಾವು ತಂದ ಕೇಸರಿ ಬಣ್ಣದ ಆಟಿಕೆಗಳನ್ನು ಚಟುವಟಿಕೆ ಕೋಣೆಯಲ್ಲಿ ಪ್ರದರ್ಶಿಸಿದ್ದರು. ಜೊತೆಗೆ ಶಾಲೆಯ ಆಯ್ದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸುತ್ತಮುತ್ತಲಿನ ಇತರ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿಯೂ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಆಚರಿಸಿ ವಿವೇಕಾನಂದರ ಜೀವನದ ಬಗೆಗಿನ ಮಾಹಿತಿಯನ್ನು ಆ ಶಾಲೆಯ ಮಕ್ಕಳಿಗೂ ತಿಳಿಯಪಡಿಸಿದರು.