Bengaluru, Dec. 7: Rashtrotsava program was organized for the students of 6 to 12 herein Rashtrotthana Vidya Kendra – Banashankari under the title ‘Punyabhumi Bharat, representing the specialties of all the states of India, folk songs, languages, costumes, festivals’. Sri N Dinesh Hegde, General Secretary of Rashtrotthna Parishath, graced the program.Sri Dinesh Hegde said that India is a holy land and a Karma Bhoomi. We are the ones born in such a land. We should build a good society. In that regard, Rashtrotthana Parishath is working. Along with education, children should continue to maintain their identity, culture, and customs. They should become an asset to the country. Also they said that everyone should do something that reaches the society by caring for the environment and cultivating self-respect.The cultural programs conducted by the students were on the subject of India’s rich heritage and included dance forms and impressive skits from various states. These included the contributions of Ahalya Bai in Madhya Pradesh, the sacrifice of Veer Savarkar in Andaman, the significance of Article 370 in Jammu and Kashmir, and the achievements of the Gupta dynasty in Bihar. Each performance celebrated India’s unity and diversity.
ಬೆಂಗಳೂರು, ಡಿ. 7: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ‘ಭಾರತದ ಎಲ್ಲಾ ರಾಜ್ಯಗಳ ಜಾನಪದ ಸೊಗಡು, ಭಾಷೆ, ವೇಷ, ಹಬ್ಬ ಇಲ್ಲಿನ ವಿಶೇಷತೆಗಳನ್ನು ಪ್ರತಿನಿಧಿಸುವ ಪುಣ್ಯಭೂಮಿ ಭಾರತ’ ಎಂಬ ಶೀರ್ಷಿಕೆಯಡಿಯಲ್ಲಿ ರಾಷ್ಟ್ರೋತ್ಸವ ಕಾರ್ಯಕ್ರಮವನ್ನು 6ರಿಂದ 12ನೇ ತರಗತಿಯ ವಿದ್ಯರ್ಥಿಗಳಿಗಾಗಿ ಆಯೋಜಿಸಲಾಗಿತ್ತು.ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ ದಿನೇಶ್ ಹೆಗ್ಡೆ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.ಶ್ರೀ ನಾ ದಿನೇಶ್ ಹೆಗ್ಡೆ ಅವರು, ಭಾರತ ಪುಣ್ಯಭೂಮಿ ಕರ್ಮಭೂಮಿ. ಇಲ್ಲಿ ಜನಿಸಿದ ನಾವೇ ಪುಣ್ಯವಂತರು. ಇಂತಹ ಭೂಮಿಯಲ್ಲಿ ಜನಿಸಿದ ನಾವು ಒಳ್ಳೆಯ ಸಮಾಜವನ್ನು ನಿರ್ಮಾಣ ಮಾಡಬೇಕು. ಆ ನಿಟ್ಟಿನಲ್ಲಿ ರಾಷ್ಟ್ರೋತ್ಥಾನ ಪರಿಷತ್ ಕಾರ್ಯವನ್ನು ನಿರ್ವಹಿಸುತ್ತಿದೆ ಎಂದರು. ಶಿಕ್ಷಣದ ಜೊತೆಯಲ್ಲಿ ಮಕ್ಕಳು ತಮ್ಮತನವನ್ನು, ತಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ಮುಂದುವರಿಸಿಕೊಂಡು ಹೋಗಬೇಕು. ದೇಶಕ್ಕೆ ಆಸ್ತಿ ಆಗಬೇಕು. ಪರ್ಯಾವರಣದ ಬಗ್ಗೆ ಕಾಳಜಿ, ಸ್ವದೇಶಿತನವನ್ನು ಬೆಳೆಸಿಕೊಂಡು ಪ್ರತಿಯೊಬ್ಬರು ಸಮಾಜವನ್ನು ತಲಪುವಂತಹ ಕೆಲಸವನ್ನು ಮಾಡೋಣ ಎಂದು ತಿಳಿಸಿದರು.ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಭಾರತದ ಶ್ರೀಮಂತ ಪರಂಪರೆಯ ವಿಷಯವಾಗಿದ್ದು, ವಿವಿಧ ರಾಜ್ಯಗಳ ನೃತ್ಯ ಪ್ರಕಾರಗಳು ಮತ್ತು ಪ್ರಭಾವಶಾಲಿ ಸ್ಕಿಟ್‌ಗಳನ್ನು ಒಳಗೊಂಡಿತ್ತು. ಇವುಗಳಲ್ಲಿ ಮಧ್ಯಪ್ರದೇಶದಲ್ಲಿ ಅಹಲ್ಯಾಬಾಯಿಯ ಕೊಡುಗೆಗಳು, ಅಂಡಮಾನ್‌ನಲ್ಲಿ ವೀರ್ ಸಾವರ್ಕರ್ ಅವರ ತ್ಯಾಗ, ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯ ಮಹತ್ತ್ವ ಮತ್ತು ಬಿಹಾರದಲ್ಲಿ ಗುಪ್ತ ರಾಜವಂಶದ ಸಾಧನೆಗಳು ಸೇರಿದ್ದವು. ಪ್ರತಿಯೊಂದು ಪ್ರದರ್ಶನವು ಭಾರತದ ಏಕತೆ ಮತ್ತು ವೈವಿಧ್ಯತೆಯನ್ನು ಕೊಂಡಾಡಿತು.