Bengaluru, Feb. 4: Ratha Saptami was celebrated herein Rashtrotthana Vidya Kendra – Banashankari. Dr. Vinay Kumar S., a yoga teacher and therapist, graced the program. Speaking, the guests said that the Sun is the source of energy for all living beings. By performing Surya Namaskar, our body becomes strong. Saying that the spine becomes strong, he explained the method of performing Surya Namaskar and its special features to the students in detail. He advised children to maintain their health. The students performed a charming yoga dance. Yoga teacher Sri Praveen presented the annual yoga report. The students and teachers performed a mass Surya Namaskar. The program ended with Shavasana/ Yoga Nidra after 108 Surya Namaskars led by the yoga teacher. As part of Ratha Saptami, a Surya Namaskar week was organized for students, parents, teachers and non-teaching staff. A total of 3,25,018 Surya Namaskars was performed this week.
ಬೆಂಗಳೂರು, ಫೆ. 4: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ರಥಸಪ್ತಮಿಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕರು ಮತ್ತು ಚಿಕಿತ್ಸಕರು ಆಗಿರುವ ಡಾ. ವಿನಯ್ ಕುಮಾರ್ ಎಸ್. ರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಅತಿಥಿಗಳು ಮಾತನಾಡುತ್ತಾ, ಸೂರ್ಯ ಸಕಲ ಜೀವ ಚರಾಚರಗಳ ಮೂಲ ಶಕ್ತಿಕೇಂದ್ರವಾಗಿದ್ದಾನೆ. ಸೂರ್ಯ ನಮಸ್ಕಾರವನ್ನು ಮಾಡುವ ಮೂಲಕ ನಮ್ಮ ದೇಹವು ಸದೃಢವಾಗುತ್ತದೆ. ಬೆನ್ನು ಮೂಳೆ ಗಟ್ಟಿಯಾಗುತ್ತದೆ ಎಂದು ಹೇಳುತ್ತಾ, ಸೂರ್ಯನಮಸ್ಕಾರವನ್ನು ಮಾಡುವ ರೀತಿ, ಅದರ ವಿಶೇಷತೆಯನ್ನು ವಿದ್ಯಾರ್ಥಿಗಳಿಗೆ ಸವಿಸ್ತಾರವಾಗಿ ತಿಳಿಸಿಕೊಟ್ಟರು. ಆರೋಗ್ಯವನ್ನು ಕಾಯ್ದುಕೊಳ್ಳಿ ಎಂಬ ಸಲಹೆಯನ್ನು ನೀಡಿದರು. ಆಕರ್ಷಕ ಯೋಗ ನೃತ್ಯವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಯೋಗ ಶಿಕ್ಷಕ ಶ್ರೀ ಪ್ರವೀಣ್ ಅವರು ವಾರ್ಷಿಕ ಯೋಗ ವರದಿಯನ್ನು ಪ್ರಸ್ತುತಪಡಿಸಿದರು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಾಮೂಹಿಕ ಸೂರ್ಯನಮಸ್ಕಾರವನ್ನು ಮಾಡಿದರು. ಯೋಗ ಶಿಕ್ಷಕರ ನೇತೃತ್ವದಲ್ಲಿ ೧೦೮ ಸೂರ್ಯನಮಸ್ಕಾರದ ನಂತರ ಶವಾಸನ/ ಯೋಗನಿದ್ರೆಯ ಮೂಲಕ ಕಾರ್ಯಕ್ರಮವು ಸಮಾಪ್ತಿಯಾಯಿತು. ರಥಸಪ್ತಮಿಯ ಅಂಗವಾಗಿ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರಿಗೆ ಸೂರ್ಯನಮಸ್ಕಾರ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಪ್ತಾಹದಲ್ಲಿ ಒಟ್ಟು 3,25,018 ಸೂರ್ಯ ನಮಸ್ಕಾರವನ್ನು ಮಾಡಲಾಯಿತು.