Bengaluru, Feb. 15: A Chandana event was organized herein Rashtrotthana Vidya Kendra – Banashankari. Sri Sridhara Swami, who served as a retired professor in the Physics department at the National College in Bengaluru and has held various responsibilities within the organization, is currently functioning as the intellectual leader of the South-Central region of the Rashtriya Swayamsevak Sangh. He was the chief guest at the event. Numerous traditional games were conducted for parents, children, and senior citizens in the school playground. Following this, self-introduction, camp songs, and a discussion was held on the topics of “My Role in the Development of Society and the Nation and Its Impact on My Holistic Growth.” During their speeches, the guests emphasized the importance of spending time with children and engaging in play, as it contributes to their physical development. Children should be encouraged to develop qualities of coexistence. It is essential to present the epics of Ramayana, Mahabharata, and Bhagavad Gita in an engaging manner to them. This approach will contribute to their holistic development, which in turn can facilitate the progress of the nation. It was emphasized that we should all work together for the country and strive to advance it. The devotional songs and dances enhanced the vibrancy of the event. Subsequently, everyone enjoyed a delightful dinner under the moonlight.
ಬೆಂಗಳೂರು, ಫೆ. 15: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಚಂದನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಭೌತಶಾಸ್ತ್ರ ವಿಭಾಗದ ನಿವೃತ್ತ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಂತರ ಸಂಘದಲ್ಲಿ ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸಿ, ಪ್ರಸ್ತುತ ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರದ ಬೌದ್ಧಿಕ ಪ್ರಮುಖರಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಶ್ರೀಧರ ಸ್ವಾಮಿ ಅವರು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಶಾಲಾ ಮೈದಾನದಲ್ಲಿ ಪೋಷಕರಿಗೆ, ಮಕ್ಕಳಿಗೆ ಹಾಗೂ ಹಿರಿಯ ನಾಗರಿಕರಿಗೆ ಹಲವಾರು ದೇಸಿ ಆಟಗಳನ್ನು ಆಡಿಸಲಾಯಿತು. ನಂತರ ಸ್ವ ಪರಿಚಯ, ಶಿಬಿರ ಗೀತೆ, ‘ಸಮಾಜ ಮತ್ತು ದೇಶದ ಅಭಿವೃದ್ಧಿಯಲ್ಲಿ ನನ್ನ ಪಾತ್ರ ಮತ್ತು ಇದರಿಂದ ನನ್ನ ಸರ್ವತೋಮುಖ ಬೆಳವಣಿಗೆ’ ಎಂಬ ವಿಷಯವನ್ನು ಕುರಿತು ಚರ್ಚೆಯನ್ನು ನಡೆಸಲಾಯಿತು. ಅತಿಥಿಗಳು ಮಾತನಾಡುತ್ತಾ ಪ್ರತಿಯೊಬ್ಬರು ಮಕ್ಕಳ ಜೊತೆ ಸಮಯವನ್ನು ಕಳೆಯಬೇಕು. ಆಟ ಆಡಬೇಕು. ಇದರಿಂದ ಮಕ್ಕಳ ದೇಹ ಹಾಗೂ ಮನಸ್ಸಿಗೆ ಸಂತೋಷವಾಗುತ್ತದೆ. ಮಕ್ಕಳಿಗೆ ಸಹಬಾಳ್ವೆ ಗುಣಗಳನ್ನು ಬೆಳೆಸಬೇಕು. ರಾಮಾಯಣ, ಮಹಾಭಾರತ, ಭಗವದ್ಗೀತೆಗಳನ್ನು ಮಕ್ಕಳಿಗೆ ರುಚಿಸುವಂತೆ ಹೇಳಿ ಕೊಡಬೇಕು. ಇದರಿಂದ ಅವರ ಸಮಗ್ರ ವಿಕಾಸ ವಾಗುತ್ತದೆ. ಆ ಮೂಲಕ ದೇಶದ ವಿಕಾಸ ಸಾಧ್ಯವಾಗುತ್ತದೆ. ನಾವೆಲ್ಲರೂ ಒಟ್ಟಾಗಿ ದೇಶಕ್ಕಾಗಿ ಕೆಲಸ ಮಾಡೋಣ ದೇಶವನ್ನು ಮುನ್ನಡೆಸೋಣ ಎಂದು ತಿಳಿಸಿದರು. ಭಜನೆ, ಹಾಡು, ನೃತ್ಯಗಳು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದವು. ನಂತರ ರುಚಿಯಾದ ಬೆಳದಿಂಗಳ ಭೋಜನವನ್ನು ಸವಿದು ಎಲ್ಲರೂ ಆನಂದಿಸಿದರು.