Bengaluru, Mar. 19: Sankalpa Diwas 2024-25 was organized for the students of classes 10 and 12 herein Rashtrotthana Vidya Kendra – Banashankari. The program was graced by the chief guest, His Holiness Sri Sri Veereshananda Saraswati Swamiji, Honorable President of Ramakrishna Vivekananda Ashram, Tumkur. School Correspondent Sri Vasanthakumar delivered the introductory remarks, explaining the importance of the concept of ‘Sankalp’ and emphasised the message that no matter how many challenges one faces, victory can be achieved with a strong determination. Astronomer Sunita Williams also gave a reference to the return of the Earth, giving a further example of how Indians face challenges without losing heart. In the ‘Deepa Pradana’ program, Pujya Swamiji handed over the lit lamp to the school principals. By lighting the lamp, the school student leaders and all the students lit the lamp for Akhand Bharat. Then the school principal of class 10 handed over the lamp to the Upa Pramukh of class 9. Then, the Principal, Smt. Purnima, taught the students the pledge of commitment. Swamiji presented a memento to the student principals and congratulated them. Addressing the students, Pujyaswamiji, in his exemplary speech, spoke about the three important principles of disciplined life, moral values and tolerance, saying that you children are the future nation builders. You can achieve success through concentration, dedication and right values. He said that true education is not limited to marks only; it should include the development of an all-round personality and philosophy. He also explained in detail the idea of ”One God in Many Forms”. He quoted a Vedic saying. “Ekam Sat Viprah Bahudha Vadanti” means, the truth is one but it is reflected in different forms. This message is asserting the unity in Indian cultural diversity, he said. On this occasion, a special episode of the film “Rashtrotthana 60” was screened. It covered the achievements and milestones of the nation building. It brought the achievements of many decades to the memory of everyone. In the cultural programs, the students performed songs and dances embodying the values of Indian culture. The students performed a short play that called upon the ninth graders to serve the nation rather than selfishness and build a healthy and sustainable society. The students shared their experiences of school life. Similarly, the parents also shared their impressions. Awards were given for the achievements of the students and the Young ATAL Innovators Award was presented.
ಬೆಂಗಳೂರು, ಮಾ. 19: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ಸಂಕಲ್ಪ ದಿವಸ್ 2024-25 ಅನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಗೌರವಾನ್ವಿತ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಶಾಲೆಯ ಕರೆಸ್ಪಾಂಡೆಂಟ್ ಶ್ರೀ ವಸಂತಕುಮಾರ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ, ‘ಸಂಕಲ್ಪ’ ಎಂಬ ಪರಿಕಲ್ಪನೆಯ ಮಹತ್ವವನ್ನು ವಿವರಿಸಿದರು ಮತ್ತು ಎಷ್ಟೇ ಸವಾಲುಗಳು ಎದುರಾದರೂ ದೃಢ ಸಂಕಲ್ಪದೊಂದಿಗೆ ಗೆಲುವನ್ನು ಸಾಧಿಸಬಹುದೆಂಬ ಸಂದೇಶವನ್ನು ಒತ್ತಿಹೇಳಿದರು. ಜೊತೆಗೆ ಖಗೋಳಶಾಸ್ತ್ರಜ್ಞೆ ಸುನಿತಾ ವಿಲಿಯಮ್ಸ್ ಅವರು ಭೂಮಿಗೆ ಮರಳುವ ಉಲ್ಲೇಖವನ್ನು ನೀಡುತ್ತಾ, ಭಾರತೀಯರು ಎದೆಗುಂದದೆ ಸವಾಲುಗಳನ್ನು ಎದುರಿಸುವ ರೀತಿಗೆ ಪೂರಕ ನಿದರ್ಶನವನ್ನು ನೀಡಿದರು. ‘ದೀಪ ಪ್ರದಾನ’ ಕಾರ್ಯಕ್ರಮದಲ್ಲಿ ಪೂಜ್ಯ ಸ್ವಾಮೀಜಿಯವರು ಶಾಲಾ ಪ್ರಮುಖರಿಗೆ ಬೆಳಗುತ್ತಿರುವ ದೀಪವನ್ನು ಹಸ್ತಾಂತರಿಸಿದರು. ದೀಪದಿಂದ ದೀಪವನ್ನು ಹಚ್ಚಿ, ಶಾಲಾ ವಿದ್ಯಾರ್ಥಿ ನಾಯಕರು ಹಾಗೂ ವಿದ್ಯಾರ್ಥಿಗಳೆಲ್ಲರೂ ಅಖಂಡ ಭಾರತಕ್ಕೆ ದೀಪವನ್ನು ಬೆಳಗಿಸಿದರು. ನಂತರ 10ನೇ ತರಗತಿಯ ಶಾಲಾ ಪ್ರಮುಖರು 9ನೇ ತರಗತಿಯ ಉಪ ಪ್ರಮುಖರಿಗೆ ದೀಪವನ್ನು ಹಸ್ತಾಂತರಿಸಿದರು. ಅನಂತರ ಪ್ರಧಾನಾಚಾರ್ಯರಾದ ಶ್ರೀಮತಿ ಪೂರ್ಣಿಮಾ ಅವರು ವಿದ್ಯಾರ್ಥಿಗಳಿಗೆ ಸಂಕಲ್ಪ ಪ್ರತಿಜ್ಞೆಯನ್ನು ಬೋಧಿಸಿದರು. ಸ್ವಾಮಿಜೀಯವರು ವಿದ್ಯಾರ್ಥಿ ಪ್ರಮುಖರಿಗೆ ಸ್ಮರಣಿಕೆಯನ್ನು ನೀಡಿ ಅಭಿನಂದಿಸಿದರು. ಪೂಜ್ಯಸ್ವಾಮಿಜೀಯವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ತಮ್ಮ ಆದರ್ಶಮಯ ಭಾಷಣದಲ್ಲಿ ಶಿಸ್ತಿನ ಜೀವನ, ನೈತಿಕ ಮೌಲ್ಯಗಳು ಮತ್ತು ಸಹನಶೀಲತೆ ಎಂಬ ಮೂರು ಪ್ರಮುಖ ತತ್ವಗಳನ್ನು ಕುರಿತು ಮಾತನಾಡುತ್ತ, ಮಕ್ಕಳಾದ ನೀವು ಭವಿಷ್ಯದ ರಾಷ್ಟ್ರನಿರ್ಮಾತೃರು. ಏಕಾಗ್ರತೆ, ಸಮರ್ಪಣಾ ಭಾವ ಮತ್ತು ಸರಿಯಾದ ಮೌಲ್ಯಗಳ ಮೂಲಕ ನೀವು ಯಶಸ್ಸನ್ನು ಸಾಧಿಸಬಹುದು. ನಿಜವಾದ ಶಿಕ್ಷಣವು ಕೇವಲ ಅಂಕಗಳಿಗೆ ಸೀಮಿತವಾಗಿಲ್ಲ; ಅದು ಸರ್ವಾಂಗೀಣ ವ್ಯಕ್ತಿತ್ವದ ವಿಕಾಸ ಮತ್ತು ತತ್ವಜ್ಞಾನವನ್ನು ಒಳಗೊಂಡಿರಬೇಕು ಎಂದರು. ಅಲ್ಲದೆ “ಬಹುರೂಪ ಏಕ ದೈವತ” ಎಂಬ ವಿಚಾರವನ್ನು ವಿಸ್ತಾರವಾಗಿ ವಿವರಿಸಿದರು. ವೇದೋಕ್ತ ಉಕ್ತಿಯನ್ನು ಉಲ್ಲೇಖಿಸಿದರು. “ಏಕಂ ಸತ್ ವಿಪ್ರಾಃ ಬಹುಧಾ ವದಂತಿ” ಅರ್ಥಾತ್, ಸತ್ಯ ಒಂದೇ ಆದರೆ ಅದು ವಿಭಿನ್ನ ರೂಪಗಳಲ್ಲಿ ಪ್ರತಿಫಲಿಸುತ್ತದೆ. ಈ ಸಂದೇಶವು ಭಾರತೀಯ ಸಾಂಸ್ಕೃತಿಕ ವೈವಿಧ್ಯತೆಯಲ್ಲಿನ ಏಕತ್ವವನ್ನು ಪ್ರತಿಪಾದಿಸುತ್ತಿದೆ ಎಂದರು. ಈ ಸಂದರ್ಭದಲ್ಲಿ “ರಾಷ್ಟ್ರೋತ್ಥಾನ 60 ” ಎಂಬ ವಿಶೇಷ ಸಂಚಿಕೆಯನ್ನು ಒಳಗೊಂಡ ಚಿತ್ರವನ್ನು ಪ್ರದರ್ಶಿಸಲಾಯಿತು. ಇದು ರಾಷ್ಟ್ರೋತ್ಥಾನದ ಸಾಧನೆ, ಕ್ರಮಿಸಿದ ಮೈಲಿಗಲ್ಲನ್ನು ಒಳಗೊಂಡಿತ್ತು. ಇದು ಹಲವು ದಶಕಗಳ ಸಾಧನೆಯನ್ನು ಪ್ರತಿಯೊಬ್ಬರ ಸ್ಮೃತಿ ಪಟಲಕ್ಕೆ ತಂದಿತು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ಒಳಗೊಂಡ ಹಾಡು ಮತ್ತು ನೃತ್ಯಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಒಂಬತ್ತನೇ ತರಗತಿಯ ಸ್ವಾರ್ಥಕ್ಕಿಂತ ಹೆಚ್ಚಾಗಿ ರಾಷ್ಟ್ರ ಸೇವೆ ಮಾಡಲು ಮತ್ತು ಸ್ವಸ್ಥ ಸುಸ್ಥಿರ ಸಮಾಜವನ್ನು ನಿರ್ಮಿಸಲು ಕರೆ ನೀಡಿದ ಕಿರುನಾಟಕವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ವಿದ್ಯಾರ್ಥಿಗಳು ತಮ್ಮ ಶಾಲಾ ಜೀವನದ ಅನುಭವಗಳನ್ನು ಹಂಚಿಕೊಂಡರು. ಹಾಗೆಯೇ ಪೋಷಕರು ಸಹ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ವಿದ್ಯಾರ್ಥಿಗಳ ಸಾಧನೆಗಳಿಗೆ ಪುರಸ್ಕಾರ ಮತ್ತು Young ATAL Innovators ಪುರಸ್ಕಾರ ಪ್ರದಾನ ಮಾಡಲಾಯಿತು.