Sankranti Festival Celebration in RVK – Banashankari

Bengaluru, Jan. 10: Sankranti festival was celebrated herein Rashtrotthana Vidya Kendra -Banashankari. The prayer hall was decorated with sesame, jaggery, Sakkare Acchu and sugarcane. The students dressed up in traditional attire and decorated and conducted the program. After the school prayer, the background of the Sankranti festival and the celebration were explained in detail by the students. Students sang a group song on Sankranti. Then they performed a beautiful dance on Sankranti. Then students were informed about the significance of Sankranti festival by symbolically distributing sesame seeds and jaggary.

ಬೆಂಗಳೂರು, ಜ. 10: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು. ಎಳ್ಳು, ಬೆಲ್ಲ, ಸಕ್ಕರೆಅಚ್ಚು, ಕಬ್ಬು ಎಲ್ಲವನ್ನು ಇರಿಸಿ ಪ್ರಾರ್ಥನಾ ಮಂದಿರವನ್ನು ಅಲಂಕರಿಸಲಾಗಿತ್ತು. ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ ತೊಟ್ಟು, ಅಲಂಕರಿಸಿಕೊಂಡು ಕಾರ್ಯಕ್ರಮವನ್ನು ಸಂಭ್ರಮದಿಂದ ನಡೆಸಿಕೊಟ್ಟರು. ಶಾಲಾ ಪ್ರಾರ್ಥನೆಯ ನಂತರ ಸಂಕ್ರಾಂತಿ ಹಬ್ಬದ ಹಿನ್ನೆಲೆ, ಆಚರಣೆ ಇವೆಲ್ಲವನ್ನು ವಿದ್ಯಾರ್ಥಿಗಳು ಸವಿವರವಾಗಿ ತಿಳಿಸಿದರು. ಸಂಕ್ರಾಂತಿ ಕುರಿತಾದ ಸಮೂಹಗೀತೆಯನ್ನು ವಿದ್ಯಾರ್ಥಿಗಳು ಹಾಡಿದರು. ನಂತರ ಸಂಕ್ರಾಂತಿಯ ಕುರಿತಾಗಿ ಸುಂದರವಾದ ನೃತ್ಯವನ್ನು ಪ್ರದರ್ಶಿಸಿದರು. ನಂತರ ಎಳ್ಳುಬೆಲ್ಲವನ್ನು ಸಾಂಕೇತಿಕವಾಗಿ ಹಂಚುವುದರ ಮೂಲಕ ಸಂಕ್ರಾಂತಿ ಹಬ್ಬದ ಮಹತ್ತ್ವವನ್ನು ವಿದ್ಯಾರ್ಥಿಗಳು ತಿಳಿಸಲಾಯಿತು.

Scroll to Top