Bengaluru, Jan. 18: Sri Satyanarayana Swamy Puja was conducted herein Rashtrotthana Vidya Kendra – Banashankari. The school premises were decorated with garlands of flowers and colorful flowers. Sri and Smt. Harshita Bhat attended the puja. The priests performed the puja. In the cultural program the children of Pre.KG sang a song about Satyanarayana Swamy. Children of UKG and Class II performed a dance performance. Later the school music teacher along with Gokulam teachers sang melodious bhajans. Sri Krishnaprasad Badi was present in the program and addressed the parents and spoke about Krishna and spoke about cultivating Sanskara in children. Gokulam Students, their parents, and grandparents participated in the puja.
ಬೆಂಗಳೂರು, ಜ. 18: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಶ್ರೀ ಸತ್ಯನಾರಾಯಣಸ್ವಾಮಿ ಪೂಜೆಯನ್ನು ನಡೆಸಲಾಯಿತು. ತಳಿರು ತೋರಣ ಹಾಗೂ ಬಣ್ಣ ಬಣ್ಣದ ಹೂವುಗಳ ಮಾಲೆಗಳಿಂದ ಶಾಲೆಯ ಆವರಣವನ್ನು ಶೃಂಗರಿಸಲಾಗಿತ್ತು. ಶ್ರೀ ಮತ್ತು ಶ್ರೀಮತಿ ಹರ್ಷಿತಾ ಭಟ್ ದಂಪತಿಗಳು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಅರ್ಚಕರು ಪೂಜೆಯನ್ನು ನೆರವೇರಿಸಿಕೊಟ್ಟರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಿ. ಕೆ.ಜಿ ಮಕ್ಕಳು ಸತ್ಯನಾರಾಯಣ ಸ್ವಾಮಿಯನ್ನು ಕುರಿತು ಹಾಡನ್ನು ಹಾಡಿದರು. ಯು.ಕೆ.ಜಿ ಮತ್ತು ಎರಡನೇ ತರಗತಿಯ ಮಕ್ಕಳು ನೃತ್ಯದ ಸೇವೆಯನ್ನು ಸಲ್ಲಿಸಿದರು. ಆನಂತರ ಶಾಲೆಯ ಸಂಗೀತ ಶಿಕ್ಷಕಿಯ ಜೊತೆಗೆ ಗೋಕುಲಂ ಶಿಕ್ಷಕಿಯರು ಸೇರಿ ಸುಮಧುರವಾದ ಭಜನೆಗಳನ್ನು ಹಾಡಿದರು. ಶ್ರೀಯುತ ಕೃಷ್ಣಪ್ರಸಾದ್ ಬದಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಪೋಷಕರನ್ನು ಉದ್ದೇಶಿಸಿ ಕೃಷ್ಣನ ಬಗ್ಗೆ ಮಾತನಾಡುತ್ತ ಮಕ್ಕಳಲ್ಲಿ ಸಂಸ್ಕಾರವನ್ನು ಬೆಳೆಸುವ ಬಗ್ಗೆ ಕಿವಿಮಾತನ್ನು ಹೇಳಿದರು. ಗೋಕುಲಮ್ ವಿದ್ಯಾರ್ಥಿಗಳು, ಅವರ ಪೋಷಕರು, ಮತ್ತು ಅಜ್ಜ-ಅಜ್ಜಿಯರು ಪೂಜಾಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.