Bengaluru, Dec. 6: Rashtrotthana Vidya Kendra – Banashankari organized ‘Rashtrotsava’ under the theme ‘Sri Krishna Vaibhava’ for classes 2 to 5.
Sri Rangaswamy Nataraj, Chief Justice of the Karnataka High Court graced the program.Sri Ganapathi Hegde, a member of the governing body and a member of the RSS provincial executive, gave the introductory speech.
The Chief Guest, speaking, said that parents should spend time with their children. They said that the role of parents is important in shaping the good future of their children.Starting from the birth of Sri Krishna, his childhood pastimes, his role in the Mahabharata, and even today, the way Krishna appears in our minds and works among all of us, the children presented the program through dance dramas and made it a success.
ಬೆಂಗಳೂರು, ಡಿ. 6: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ 2ರಿಂದ 5ನೇ ತರಗತಿಗೆ ‘ಶ್ರೀಕೃಷ್ಣವೈಭವ’ ಎನ್ನುವ ವಿಷಯದಡಿ ರಾಷ್ಟ್ರೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಾದೀಶರಾದ ಶ್ರೀ ರಂಗಸ್ವಾಮಿ ನಟರಾಜ್ ಅವರು ಆಗಮಿಸಿದ್ದರು. ಆಡಳಿತ ಮಂಡಳಿಯ ಸದಸ್ಯರು, ಆರ್. ಎಸ್. ಎಸ್. ನ ಪ್ರಾಂತ ಕಾರ್ಯಕಾರಿಣಿ ಸದಸ್ಯರು ಆಗಿರುವ ಶ್ರೀಯುತ ಗಣಪತಿ ಹೆಗ್ಡೆಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅಭ್ಯಾಗತರು ಮಾತನಾಡುತ್ತಾ, ಪೋಷಕರು ಮಕ್ಕಳ ಜೊತೆ ಸಮಯವನ್ನು ಕಳೆಯಬೇಕು. ಮಕ್ಕಳ ಉತ್ತಮವಾದ ಭವಿಷ್ಯವನ್ನು ರೂಪಿಸುವಲ್ಲಿ ಪೋಷಕರ ಪಾತ್ರ ಮಹತ್ತ್ವದ್ದು ಎಂದು ಹಿತನುಡಿಯನ್ನು ಹೇಳಿದರು. ಶ್ರೀ ಕೃಷ್ಣನ ಜನನದಿಂದ ಆರಂಭವಾಗಿ ಆತನ ಬಾಲಲೀಲೆಗಳು, ಮಹಾಭಾರತದಲ್ಲಿ ಆತನ ಪಾತ್ರ, ಇಂದಿಗೂ ನಮ್ಮೆಲ್ಲರ ಮಧ್ಯೆ ನಮ್ಮ ಮನಸ್ಸಿನಲ್ಲಿ, ಕೆಲಸಗಳಲ್ಲಿ, ಕೃಷ್ಣನು ಕಾಣಿಸಿಕೊಳ್ಳುವ ರೀತಿಯನ್ನು ಮಕ್ಕಳು ನೃತ್ಯ ನಾಟಕಗಳ ಮೂಲಕ ಪ್ರಸ್ತುತಪಡಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.