Bengaluru, Apr. 7: Sri Ram Navami festival was celebrated herein Rashtrotthana Vidya Kendra – Banashankari.In the presence of the school correspondent Sri Vasanth Kumar and the principal Poornima, the worship of Rama began with a bhajan. After the worship, the students explained the method of celebrating the festival of Ram Navami and the importance of the celebration. In Hindu tradition, Sri Rama, the hero of the Ramayana and the king of Ayodhya, is worshipped as an incarnation of Vishnu. Sri Ram Navami is celebrated on the Shukla Paksha of the Chaitra month, eight days after Yugadi. The students said that on Ram Navami, people in South Indian homes, especially in Karnataka, are celebrated by offering Panaka and Kosambari to the guests.Then, selected students sang a song of Rama and performed a beautiful dance.
ಬೆಂಗಳೂರು, ಏ. 7: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಶ್ರೀ ರಾಮನವಮಿ ಹಬ್ಬವನ್ನು ಆಚರಿಸಲಾಯಿತು.ಶಾಲೆಯ ಕರೆಸ್ಪಾಂಡೆಂಟ್ ಶ್ರೀ ವಸಂತ ಕುಮಾರ್ ಹಾಗೂ ಪ್ರಧಾನಾಚಾರ್ಯರಾದ ಪೂರ್ಣಿಮಾ ಅವರ ಸಮ್ಮುಖದಲ್ಲಿ ರಾಮನ ಪೂಜೆಯು ಭಜನೆಯೊಂದಿಗೆ ಪ್ರಾರಂಭವಾಯಿತು. ಪೂಜೆಯ ನಂತರ ವಿದ್ಯಾರ್ಥಿಗಳು ರಾಮನವಮಿ ಹಬ್ಬವನ್ನು ಆಚರಿಸುವ ವಿಧಾನ ಮತ್ತು ಆಚರಣೆಯ ಮಹತ್ವವನ್ನು ತಿಳಿಸುತ್ತ, ಹಿಂದೂ ಸಂಪ್ರದಾಯದಲ್ಲಿ ರಾಮಾಯಣದ ಕಥಾ ನಾಯಕ ಹಾಗೂ ಅಯೋಧ್ಯೆಯ ರಾಜನಾದ ಶ್ರೀರಾಮನನ್ನು ವಿಷ್ಣುವಿನ ಅವತಾರವಾಗಿ ಪೂಜಿಸಲಾಗುತ್ತದೆ. ಶ್ರೀ ರಾಮನವಮಿ ಯುಗಾದಿಯ ಎಂಟು ದಿನಗಳ ನಂತರ ಚೈತ್ರ ಮಾಸದ ಶುಕ್ಲ ಪಕ್ಷದಲ್ಲಿ ಆಚರಿಸಲಾಗುತ್ತದೆ. ರಾಮನವಮಿಯಂದು ದಕ್ಷಿಣ ಭಾರತದ ಮನೆಗಳಲ್ಲಿ, ಮುಖ್ಯವಾಗಿ ಕರ್ನಾಟಕದಲ್ಲಿ, ಪಾನಕ ಹಾಗೂ ಕೋಸಂಬರಿಗಳನ್ನು ಬಂದವರಿಗೆ ನೀಡಿ ಆಚರಿಸಲಾಗುತ್ತದೆ ಎಂದು ವಿದ್ಯಾರ್ಥಿಗಳು ತಿಳಿಸಿದರು. ನಂತರ ಆಯ್ದ ವಿದ್ಯಾರ್ಥಿಗಳು ರಾಮನ ಹಾಡನ್ನು ಹಾಡಿದರು ಮತ್ತು ಸುಂದರವಾಗಿ ನೃತ್ಯವನ್ನು ಪ್ರದರ್ಶಿಸಿದರು.