Bengaluru, Dec. 19: Mathematician Srinivasa Ramanujan’s Birth Anniversary was celebrated herein Rashtrotthana Vidya Kendra – Banashankari. On the significance of the day, Ramanujan’s contribution to the field of mathematics was discussed. Talking about the life of Srinivasa Ramanujan students said that he is famous as the greatest Indian mathematician in the world. The students also said that in 2012, former Prime Minister Manmohan Singh had declared Srinivasa Ramanujan’s birthday, December 22, as National Mathematics Day. Mathematics week was observed to mark the birth anniversary of Srinivasa Ramanujan. Various activities related to mathematics were organized every day. Dance, information, maths and music, quizzes about Ramanujan were organized as part of the maths week. Students were also given certificates for various competitions conducted in the classroom.
ಬೆಂಗಳೂರು, ಡಿ. 19: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಜಯಂತಿಯನ್ನು ಆಚರಿಸಲಾಯಿತು. ದಿನದ ಮಹತ್ತ್ವದ ಕುರಿತು, ಗಣಿತ ಕ್ಷೇತ್ರಕ್ಕೆ ರಾಮಾನುಜನ್ ಕೊಡುಗೆ, ಶ್ರೀನಿವಾಸ ರಾಮಾನುಜನ್ ಅವರ ಜೀವನದ ಕುರಿತು ಮಾತನಾಡಿದರು. ಇವರು ವಿಶ್ವದ ಶ್ರೇಷ್ಠ ಭಾರತೀಯ ಗಣಿತಜ್ಞರೆಂದು ಪ್ರಖ್ಯಾತರಾಗಿದ್ದಾರೆ. 2012ರಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನವಾದ ಡಿಸೆಂಬರ್ 22ನ್ನು ರಾಷ್ಟ್ರೀಯ ಗಣಿತ ದಿನವೆಂದು ಘೋಷಿಸಿದ್ದರು ಎಂದು ವಿದ್ಯಾರ್ಥಿಗಳು ತಿಳಿಸಿದರು. ಶ್ರೀನಿವಾಸ ರಾಮಾನುಜನ್ ಅವರ ಜಯಂತಿಯ ಅಂಗವಾಗಿ ಗಣಿತ ಸಪ್ತಾಹವನ್ನು ಆಚರಿಸಲಾಯಿತು. ಪ್ರತಿದಿನ ಗಣಿತಕ್ಕೆ ಸಂಬಂಧಿಸಿದ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ರಾಮಾನುಜನ್ ಅವರ ಬಗ್ಗೆ ನೃತ್ಯ, ಮಾಹಿತಿ, ಗಣಿತ ಮತ್ತು ಸಂಗೀತ, ರಸಪ್ರಶ್ನೆಗಳೆಲ್ಲವನ್ನು ಗಣಿತ ಸಪ್ತಾಹದ ಅಂಗವಾಗಿ ಏರ್ಪಡಿಸಲಾಗಿತ್ತು. ಹಾಗೆಯೇ ತರಗತಿಯಲ್ಲಿ ನಡೆಸಲಾದ ವಿವಿಧ ಸ್ಪರ್ಧೆಗಳಿಗೆ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನೂ ನೀಡಲಾಯಿತು.