Srujanotsava’ in RVK- Banashankari

Bengaluru, Feb. 1: ‘Srujanotsava’ was organized for Gokulam children herein Rashtrotthana Vidya Kendra – Banashankari. Sri Ashok Kumar, former Deputy Director, Pre-University Education Department, arrived as the Chief Guest and inaugurated the program. Speaking about the parents and children, he expressed his good opinion about the school. Children participated in various activities, science experiments, rhymes, shlokas. Children made models on various topics very creatively and talked about them. Parents watched the children’s performance, listened to the children’s words and participated in the experiments and games they did and encouraged the children.

ಬೆಂಗಳೂರು, ಫೆ. 1: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಗೋಕುಲಂ ಮಕ್ಕಳಿಗಾಗಿ ಸೃಜನೋತ್ಸವವನ್ನು ಆಯೋಜಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಶ್ರೀ ಅಶೋಕ್ ಕುಮಾರ್, ಮಾಜಿ ಉಪನಿರ್ದೇಶಕ, ಪದವಿಪೂರ್ವ ಶಿಕ್ಷಣ ಇಲಾಖೆ ಅವರು ಆಗಮಿಸಿ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡುತ್ತ, ಪೋಷಕರು ಮತ್ತು ಮಕ್ಕಳನ್ನು ಕುರಿತು ಮಾತನಾಡುತ್ತಾ ಶಾಲೆಯ ಬಗೆಗಿನ ತಮ್ಮ ಒಳ್ಳೆಯ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಮಕ್ಕಳು ವಿವಿಧ ಚಟುವಟಿಕೆಗಳು, ವಿಜ್ಞಾನ ಪ್ರಯೋಗಗಳು, ಪ್ರಾಸಗಳು, ಶ್ಲೋಕಗಳಲ್ಲಿ ಭಾಗವಹಿಸಿದರು. ಮಕ್ಕಳು ವಿವಿಧ ವಿಷಯಗಳ ಮೇಲೆ ಬಹಳ ಸೃಜನಶೀಲವಾಗಿ ಮಾದರಿಗಳನ್ನು ತಯಾರಿಸಿ ಅವುಗಳ ಬಗ್ಗೆ ಮಾತನಾಡಿದರು. ಪೋಷಕರು ಮಕ್ಕಳ ಪ್ರದರ್ಶನವನ್ನು ನೋಡಿ, ಮಕ್ಕಳ ಮಾತುಗಳನ್ನು ಕೇಳಿ ಅವರು ಮಾಡಿದ ಪ್ರಯೋಗ, ಆಟಗಳಲ್ಲಿ ಪಾಲ್ಗೊಂಡು ಮಕ್ಕಳನ್ನು ಪ್ರೋತ್ಸಾಹಿಸಿದರು.

Scroll to Top