Swearing-in Ceremony of Student Union Leaders in RVK – Banashankari

Bengaluru, June 18: The Swearing-in Ceremony of the Student Union Leaders for the 2024-25th educational year took place at Rastrotthana Vidya Kendra –Banashankari. Sri K. Venkatesh, the Police Inspector of Kaggalipura, graced the occasion as the esteemed chief guest.

The election process was completed by forming the election committee, appointing the commissioner and deputy commissioner, voting through technology after submission of nomination papers, verification, withdrawal and campaigning, counting of votes and declaration of winners.

The oath was delivered to the selected candidates by Pradhanacharya, Smt. Poornima.A dance and song entertainment program were performed by the students. Words by Sri K. Venkatesh – In a rose garden called a school, students are the rose flowers and teachers are the gardeners. Leadership qualities should be developed in the student body. A leader should first be strong, create unity in diversity and spread leadership qualities to the group, bring respect to the school, home society.

ಬೆಂಗಳೂರು, ಜೂನ್ 18:ರಾಷ್ಟ್ರೋತ್ಥಾನ ವಿದ್ಯಾಕೇಂದ್ರ-ಬನಶಂಕರಿಯಲ್ಲಿ 2024-25ನೇ ಸಾಲಿನ ವಿದ್ಯಾರ್ಥಿ ಸಂಘದ ನಾಯಕತ್ವ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭವನ್ನು ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಕಗ್ಗಲಿಪುರ ಪೋಲಿಸ್ ಇನ್ಸ್ಪೆಕ್ಟರ್, ಶ್ರೀ ಕೆ. ವೆಂಕಟೇಶ್ ಅವರು ಆಗಮಿಸಿದ್ದರು.

ಚುನಾವಣಾ ಪ್ರಕ್ರಿಯೆಯಲ್ಲಿ ಚುನಾವಣಾ ಸಮಿತಿ ರಚಿಸಿ,ಕಮಿಷನರ್ ಉಪಕಮಿಷನರ್ ನೇಮಕ ಮಾಡಿ,ನಾಮಪತ್ರ ಸಲ್ಲಿಕೆ,ಪರಿಶೀಲನೆ,ಹಿಂಪಡೆಯುವಿಕೆ ಹಾಗೂ ಪ್ರಚಾರದ ಬಳಿಕ ತಂತ್ರಜ್ಞಾನದ ಮೂಲಕ ಮತದಾನ ಮಾಡಿದ ಬಳಿಕ ಮತ ಎಣಿಕೆ ಹಾಗೂ ವಿಜೇತರ ಘೋಷಣೆಯ ಮೂಲಕ ಚುನಾವಣಾಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಯಿತು.

ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರಧಾನಾಚಾರ್ಯೆ, ಶ್ರೀಮತಿ ಪೂರ್ಣಿಮಾ ಪ್ರತಿಜ್ಞಾವಿಧಿ ಬೋಧಿಸಿದರು. ವಿದ್ಯಾರ್ಥಿಗಳು ನೃತ್ಯ ಹಾಡಿನ ಮನರಂಜನೆ ಕಾರ್ಯಕ್ರಮ ನಡೆಸಿಕೊಟ್ಟರು.ಶ್ರೀ ಕೆ. ವೆಂಕಟೇಶ್ ಅವರ ಮಾತುಗಳು – ಶಾಲೆ ಎನ್ನುವ ಗುಲಾಬಿತೋಟದಲ್ಲಿ ವಿದ್ಯಾರ್ಥಿಗಳು ಗುಲಾಬಿ ಹೂವುಗಳಾಗಿದ್ದರೆ, ಶಿಕ್ಷಕರು ತೋಟಗಾರರು. ವಿದ್ಯಾರ್ಥಿದೆಸೆಯಲ್ಲಿ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ನಾಯಕನಾದವನು ಮೊದಲು ತಾನು ಸದೃಢನಾಗಿ, ವಿವಿಧತೆಯಲ್ಲಿ ಏಕತೆಯನ್ನು ರೂಪಿಸಿ, ಗುಂಪಿಗೂ ನಾಯಕತ್ವದ ಗುಣವನ್ನು ಹರಡಬೇಕು, ಶಾಲೆ, ಮನೆ ಸಮಾಜಕ್ಕೆ ಗೌರವ ತಂದುಕೊಡಬೇಕು.

Scroll to Top