Bengaluru, Dec. 20-21: A teacher rejuvenation workshop was organized herein Rashtrotthana Vidya Kendra – Banashankari. All the teachers of Rashtrotthana Vidya Kendra Banashankari and Somanahalli participated in this workshop. Dr. Prema, who is engaged in the medical profession arrived as the Chief Guest at the opening ceremony of the program. In his speech, Dr. Prema talked about the life, achievements of Birsa Munda. In the following sessions, the teachers were divided into three groups. What is Panchamukhi education, how to implement Panchamukhi education in the classroom was discussed here. During the sessions taken by yoga teachers on stress management, they focused on pranayama and meditation techniques. In the background of Rashtreeya Swayamsevak Sangh celebrating its Centenary by 2025 and Rashtrotthana Parishad celebrating its 60th year, the next session was organized on Pancha Parivrthana to be made in the society. The session was conducted by Sri Krishna Ramaswamy, an activist of Rashtreeya Swayamsevak Sangh. During the second day, information was given about educational goals, effects of Anniversaries and Festivals celebrated in national schools, proper use of smart board in classrooms and lesson planning. All the sessions were conducted by School Principal Smt. Purnima, Somanahalli School Principal Smt. Ramya Udupa, Vice Principal, School Coordinator and Subject Head in different groups.
ಬೆಂಗಳೂರು, ಡಿ. 20-21: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಶಿಕ್ಷಕರ ಪುನಶ್ಚೇತನ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಬನಶಂಕರಿ ಮತ್ತು ಸೋಮನಹಳ್ಳಿಯ ಎಲ್ಲಾ ಶಿಕ್ಷಕರು ಈ ಕಾರ್ಯಗಾರದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ವೈದ್ಯ ವೃತ್ತಿಯಲ್ಲಿ ತೊಡಗಿರುವ ಡಾ. ಪ್ರೇಮಾ ಅವರು ತಮ್ಮ ಭಾಷಣದಲ್ಲಿ ಬಿರ್ಸಾ ಮುಂಡ ಅವರ ವಿಚಾರವನ್ನು, ಜೀವನದ ಯಶೋಗಾಥೆಯನ್ನು ತಿಳಿಸಿದರು. ಮುಂದಿನ ಅವಧಿಗಳಲ್ಲಿ ಶಿಕ್ಷಕರನ್ನು ಮೂರು ಗುಂಪುಗಳನ್ನಾಗಿ ವಿಭಾಗಿಸಲಾಗಿತ್ತು. ಪಂಚಮುಖಿ ಶಿಕ್ಷಣ ಎಂದರೇನು, ಪಂಚಮುಖಿ ಶಿಕ್ಷಣವನ್ನು ತರಗತಿಯಲ್ಲಿ ಹೇಗೆ ಅಳವಡಿಸಿಕೊಳ್ಳುವುದು ಎಂಬ ವಿಚಾರವನ್ನು ಇಲ್ಲಿ ಚರ್ಚಿಸಲಾಯಿತು. ಒತ್ತಡ ನಿರ್ವಹಣೆಯ ಕುರಿತು ಯೋಗ ಶಿಕ್ಷಕರು ತೆಗೆದುಕೊಂಡ ಅವಧಿಯಲ್ಲಿ ಪ್ರಾಣಾಯಾಮ ಮತ್ತು ಧ್ಯಾನ ತಂತ್ರದ ಬಗ್ಗೆ ಗಮನ ನೀಡಿದರು. 2025ಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘವು ಶತಮಾನೋತ್ಸವವನ್ನು ಮತ್ತು ರಾಷ್ಟ್ರೋತ್ಥಾನ ಪರಿಷತ್ 60ನೇ ವರ್ಷದ ಸಂಭ್ರಮವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಸಮಾಜದಲ್ಲಿ ಮೂಡಿಸಬೇಕಾದ ಪಂಚಪರಿವರ್ತನೆಗಳ ಬಗ್ಗೆ ಮುಂದಿನ ಅವಧಿಯನ್ನು ಆಯೋಜಿಸಲಾಗಿತ್ತು. ಅವಧಿಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರಾದ ಶ್ರೀಯುತ ಕೃಷ್ಣ ರಾಮಸ್ವಾಮಿ ಅವರು ನಡೆಸಿಕೊಟ್ಟರು. ಎರಡನೇ ದಿನದ ಅವಧಿಯಲ್ಲಿ ಶೈಕ್ಷಣಿಕ ಗುರಿಗಳು, ರಾಷ್ಟ್ರೋತ್ಥಾನ ಶಾಲೆಗಳಲ್ಲಿ ಆಚರಿಸುವ ಜಯಂತಿಗಳು ಮತ್ತು ಹಬ್ಬಗಳ ಪರಿಣಾಮಗಳು, ಸ್ಮಾರ್ಟ್ ಬೋರ್ಡನ್ನು ತರಗತಿಗಳಲ್ಲಿ ಸಮರ್ಪಕವಾಗಿ ಬಳಸುವ ವಿಧಾನ ಹಾಗೂ ಪಾಠ ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡಲಾಗಿತ್ತು.ಎಲ್ಲಾ ಅವಧಿಗಳನ್ನು ಶಾಲೆಯ ಪ್ರಧಾನಾಚಾರ್ಯರಾದ ಶ್ರೀಮತಿ ಪೂರ್ಣಿಮಾ, ಸೋಮನಹಳ್ಳಿ ಶಾಲೆಯ ಪ್ರಧಾನಾಚಾರ್ಯರಾದ ಶ್ರೀಮತಿ ರಮ್ಯ ಉಡುಪ, ಉಪ ಪ್ರಧಾನಾಚಾರ್ಯರು, ಶಾಲಾ ಸಂಯೋಜಕರು ಹಾಗೂ ವಿಷಯ ಮುಖ್ಯಸ್ಥರು ವಿವಿಧ ಗುಂಪುಗಳಲ್ಲಿ ನಡೆಸಿಕೊಟ್ಟರು