Bengaluru, Mar. 31: The inaugural program of the summer camp was organized herein Rashtrotthana Vidya Kendra – Banashankari. After the inauguration ceremony, the Principal wished the students a good experience. He informed that the camp will be held from March 31 to April 14, 2025 and gave comprehensive information about the camp. Around 80 interested students participated in the camp, which included various activities like swimming, yoga, basketball, table tennis, badminton, athletics, football, kho-kho, volleyball, art and craft, music, dance, tabla, drama, culture and indigenous sports. After the inauguration program, the students went to the places of various activities. The students enthusiastically participated in the activities of their choice and made the first day of the camp a success.
ಬೆಂಗಳೂರು, ಮಾ. 31: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಬೇಸಿಗೆ ಶಿಬಿರದ ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಉದ್ಘಾಟನಾ ಸಮಾರಂಭದ ಬಳಿಕ, ಪ್ರಧಾನಾಚಾರ್ಯರು ಶಿಬಿರವು ವಿದ್ಯಾರ್ಥಿಗಳಿಗೆ ಒಳ್ಳೆಯ ಅನುಭವವನ್ನು ನೀಡಲಿ ಎಂಬ ಶುಭ ಹಾರೈಸಿದರು. ಈ ಶಿಬಿರವು 2025ರ ಮಾರ್ಚ್ 31ರಿಂದ ಏಪ್ರಿಲ್ 14ರವರೆಗೆ ನಡೆಯಲಿದೆ ಎಂದು ತಿಳಿಸುತ್ತಾ ಶಿಬಿರದ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಈಜು, ಯೋಗ, ಬ್ಯಾಸ್ಕೆಟ್‌ಬಾಲ್, ಟೇಬಲ್ ಟೆನಿಸ್, ಬ್ಯಾಡ್ಮಿಂಟನ್, ಅಥ್ಲೆಟಿಕ್ಸ್, ಫುಟ್‌ಬಾಲ್, ಖೋ-ಖೋ, ವಾಲಿಬಾಲ್, ಕಲೆ ಮತ್ತು ಕರಕುಶಲ, ಸಂಗೀತ, ನೃತ್ಯ, ತಬಲ, ನಾಟಕ, ಸಂಸ್ಕಾರ ಹಾಗೂ ದೇಶೀಯ ಕ್ರೀಡೆಗಳಂತಹ ವಿವಿಧ ಚಟುವಟಿಕೆಗಳನ್ನು ಒಳಗೊಂಡ ಈ ಶಿಬಿರದಲ್ಲಿ ಸುಮಾರು 80 ಆಸಕ್ತ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಉದ್ಘಾಟನಾ ಕಾರ್ಯಕ್ರಮದ ನಂತರ, ವಿದ್ಯಾರ್ಥಿಗಳು ವಿವಿಧ ಚಟುವಟಿಕೆಗಳ ಸ್ಥಳಗಳಿಗೆ ತೆರಳಿದರು. ವಿದ್ಯಾರ್ಥಿಗಳು ಉತ್ಸಾಹದಿಂದ ತಮ್ಮ ಆಯ್ಕೆಯ ಚಟುವಟಿಕೆಗಳಲ್ಲಿ ಭಾಗವಹಿಸಿ ಮೊದಲ ದಿನದ ಶಿಬಿರವನ್ನು ಯಶಸ್ವಿಗೊಳಿಸಿದರು.