Bengaluru, Mar. 24: The “Martyrs’ Day” of the great revolutionaries Bhagat Singh, Sukhdev, and Raj Guru was celebrated herein Rashtrotthana Vidya Kendra – Banashankari.The students spoke about the lives of these three leaders and said that this Martyrs’ Day is a day to remember their contribution to the country’s freedom movement. They said that this Martyrs’ Day is celebrated to remember the unparalleled heroism of Bhagat Singh, Rajguru, and Sukhdev, to pay tribute to the unparalleled freedom fighters, and to make the people of the country remember the sacrifice and martyrdom of the revolutionary leaders who were hanged in Lahore Central Jail.The students performed a play commemorating the bravery, adventure, and sacrifice of the three heroes.
ಬೆಂಗಳೂರು, ಮಾ. 24: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ದಿನಾಂಕ ಮಹಾನ್ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಸುಖದೇವ್, ರಾಜ್ ಗುರು ಅವರ ‘ಹುತಾತ್ಮರ ದಿನ’ವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಈ ಮೂವರು ನಾಯಕರ ಜೀವನದ ಕುರಿತು ಮಾತನಾಡುತ್ತ, ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಅವರ ಕೊಡುಗೆಯನ್ನು ಸ್ಮರಿಸುವ ದಿನವೇ ಈ ಹುತಾತ್ಮರ ದಿನಾಚರಣೆ. ಭಗತ್ ಸಿಂಗ್, ರಾಜಗುರು, ಸುಖದೇವ್ ಅವರ ಸಾಟಿಯಿಲ್ಲದ ವೀರತ್ವವನ್ನು ನೆನಪಿಟ್ಟುಕೊಳ್ಳಲು, ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಲು, ಲಾಹೋರ್ ಸೆಂಟ್ರಲ್ ಜೈಲಿನಲ್ಲಿ ಗಲ್ಲಿಗೇರಿಸಲ್ಪಟ್ಟ ಕ್ರಾಂತಿಕಾರಿ ನಾಯಕರ ತ್ಯಾಗವನ್ನು, ಬಲಿದಾನವನ್ನು ದೇಶದ ಜನತೆ ನೆನಪಿಸಿಕೊಳ್ಳಲು ಈ ಹುತಾತ್ಮರ ದಿನವನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು.
ಮೂವರು ವೀರರ ಶೌರ್ಯ, ಸಾಹಸ, ಬಲಿದಾನವನ್ನು ಸ್ಮರಿಸುವ ನಾಟಕವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.