Utthana Dwadashi Celebration in RVK – Banshankari

Bengaluru, Nov. 13: Utthana Dwadashi was celebrated herein Rashtrotthana Vidya Kendra – Banashankari.The Principal, Smt. Purnima, the Head and the Mothers performed the puja by applying turmeric and saffron to the Tulsi plant, garlanding it and performing Aarti.“This festival is celebrated on the 12th day of the Shukla Paksha of the Kartik month, i.e. on Dwadashi, with the name Utthana Dwadashi. It is customary to worship a mountain marigold plant along with a Tulsi plant. Brindavan is decorated with lamps. On this day, a Tulsi tree is decorated with rangoli, flowers and mango leaves and an idol of Krishna/ Saligram is placed there and worshipped,” thus the children explained the importance and method of celebrating Tulsi Puja. The students sang a group song about Tulsi.

ಬೆಂಗಳೂರು, ನ. 13: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಉತ್ಥಾನ ದ್ವಾದಶಿಯನ್ನು ಆಚರಿಸಲಾಯಿತು.ಪ್ರಧಾನಾಚಾರ್ಯರಾದ ಶ್ರೀಮತಿ ಪೂರ್ಣಿಮಾ, ಪ್ರಮುಖರು ಮತ್ತು ಮಾತೆಯರು ತುಳಸಿಗೆ ಅರಶಿನ ಕುಂಕುಮವನ್ನು ಹಚ್ಚಿ, ಹಾರ ಹಾಕಿ, ಆರತಿ ಎತ್ತಿ ಪೂಜೆಯನ್ನು ನೆರವೇರಿಸಿದರು.
“ಕಾರ್ತಿಕಮಾಸದ ಶುಕ್ಲಪಕ್ಷದ ೧೨ನೇ ದಿನ ಅಂದರೆ ದ್ವಾದಶಿಯಂದು ಈ ಹಬ್ಬವನ್ನು ಉತ್ಥಾನ ದ್ವಾದಶಿ ಎಂಬ ಹೆಸರಿನಿಂದ ಆಚರಿಸಲಾಗುತ್ತದೆ. ತುಳಸಿಗಿಡದೊಂದಿಗೆ ಬೆಟ್ಟದನೆಲ್ಲಿಕಾಯಿ ಗಿಡವನ್ನೂ ಇಟ್ಟು ಪೂಜಿಸುವ ರೂಢಿ ಇದೆ. ದೀಪಗಳಿಂದ ಬೃಂದಾವನವನ್ನು ಅಲಂಕರಿಸಲಾಗುತ್ತದೆ. ಈ ದಿನದಂದು ತುಳಸಿ ಕಟ್ಟೆಯನ್ನು ರಂಗೋಲೆ, ಹೂವು ಹಾಗೂ ಮಾವಿನ ಎಲೆಗಳಿಂದ ಅಲಂಕರಿಸಿ ಕೃಷ್ಣನ ಮೂರ್ತಿ/ ಸಾಲಿಗ್ರಾಮ ಇರಿಸಿ ಪೂಜಿಸಲಾಗುತ್ತದೆ” ಎನ್ನುತ್ತ ಮಕ್ಕಳು ತುಳಸಿ ಪೂಜೆಯನ್ನು ಆಚರಿಸುವ ಮಹತ್ತ್ವವನ್ನು ಮತ್ತು ವಿಧಾನವನ್ನು ತಿಳಿಸಿಕೊಟ್ಟರು. ತುಳಸಿಯನ್ನು ಕುರಿತಂತೆ ವಿದ್ಯಾರ್ಥಿಗಳು ಸಮೂಹ ಗೀತೆಯನ್ನು ಹಾಡಿದರು.

Scroll to Top