Vasant Panchami in RVK – Banashankari

Bengaluru, Feb. 3: Vasant Panchami was celebrated herein Rashtrotthana Vidya Kendra – Banashankari. Saraswati Puja was performed on the occasion of Vasant Panchami. Along with the puja, all the students sang bhajans. Explaining the significance of the day, the students said that Vasant Panchami is a Hindu festival, which is usually celebrated in the spring of February. The students said that Goddess Saraswati, the goddess of knowledge, music and education, is worshipped on this auspicious day. The students performed a dance. The students sang a group song melodiously. The students worshipped Saraswati by offering prayers, reciting shlokas and playing musical instruments like tabla and flute. All the students performed Saraswati Puja in their respective classes. A pooja was performed in all the classes by tying a garland in front of the classroom, making a rangoli, decorating the picture of Goddess Saraswati with flowers, applying saffron, flowers, lighting a lamp, and placing each of their books in front of the deity. The students sang bhajans. Finally, prasad was distributed.

ಬೆಂಗಳೂರು, ಫೆ. 3: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ವಸಂತ ಪಂಚಮಿಯನ್ನು ಆಚರಿಸಲಾಯಿತು. ವಸಂತ ಪಂಚಮಿಯ ಪ್ರಯುಕ್ತ ಸರಸ್ವತಿ ಪೂಜೆಯನ್ನು ನೆರವೇರಿಸಲಾಯಿತು. ಪೂಜೆಯ ಜೊತೆಗೆ ವಿದ್ಯಾರ್ಥಿಗಳೆಲ್ಲರೂ ಭಜನೆಯನ್ನು ಹಾಡಿದರು. ದಿನದ ಮಹತ್ವವನ್ನು ವಿದ್ಯಾರ್ಥಿಗಳು ತಿಳಿಸುತ್ತ, ವಸಂತ ಪಂಚಮಿಯು ಹಿಂದೂ ಹಬ್ಬವಾಗಿದ್ದು, ಇದನ್ನು ಸಾಮಾನ್ಯವಾಗಿ ಫೆಬ್ರವರಿಯ ವಸಂತಕಾಲದಲ್ಲಿ ಆಚರಿಸಲಾಗುತ್ತದೆ. ಈ ಶುಭ ದಿನದಂದು ಜ್ಞಾನ, ಸಂಗೀತ ಮತ್ತು ವಿದ್ಯೆಗೆ ದೇವತೆಯಾಗಿರುವ ಸರಸ್ವತಿ ದೇವಿಯನ್ನು ಪೂಜಿಸಲಾಗುತ್ತದೆ ಎಂದು ವಿದ್ಯಾರ್ಥಿಗಳು ತಿಳಿಸಿದರು. ವಿದ್ಯಾರ್ಥಿಗಳು ನೃತ್ಯವನ್ನು ಪ್ರದರ್ಶಿಸಿದರು. ಸಮೂಹ ಗೀತೆಯನ್ನು ವಿದ್ಯಾರ್ಥಿಗಳು ಸುಶ್ರಾವ್ಯವಾಗಿ ಹಾಡಿದರು. ವಿದ್ಯಾರ್ಥಿಗಳು ಪ್ರಾರ್ಥನೆಗಳು, ಶ್ಲೋಕಗಳ ಪಠಣ ಮತ್ತು ತಬಲಾ ಮತ್ತು ಕೊಳಲಿನಂತಹ ಸಂಗೀತ ವಾದ್ಯಗಳನ್ನು ನುಡಿಸುವ ಮೂಲಕ ಸರಸ್ವತಿಯನ್ನು ಆರಾಧಿಸಿದರು. ವಿದ್ಯಾರ್ಥಿಗಳೆಲ್ಲರೂ ತಮ್ಮ ತಮ್ಮ ತರಗತಿಗಳಲ್ಲಿ ಸರಸ್ವತಿ ಪೂಜೆಯನ್ನು ನೆರವೇರಿಸಿದರು. ತರಗತಿಯ ಮುಂದೆ ತೋರಣ ಕಟ್ಟಿ, ರಂಗೋಲಿಯನ್ನು ಹಾಕಿ, ಸರಸ್ವತಿ ದೇವಿಯ ಚಿತ್ರಕ್ಕೆ ಹೂವಿನಿಂದ ಅಲಂಕರಿಸಿ, ಅರಶಿನ ಕುಂಕುಮ, ಹೂ ಹಣ್ಣಿಟ್ಟು, ದೀಪವನ್ನು ಬೆಳಗಿಸಿ, ಎಲ್ಲಾ ವಿದ್ಯಾರ್ಥಿಗಳು ತಮ್ಮ ಒಂದೊಂದು ಪುಸ್ತಕವನ್ನು ದೇವರ ಮುಂದೆ ಇಟ್ಟು ಎಲ್ಲಾ ತರಗತಿಗಳಲ್ಲಿ ಪೂಜೆಯನ್ನು ನೆರವೇರಿಸಲಾಯಿತು. ವಿದ್ಯಾರ್ಥಿಗಳು ಭಜನೆಯನ್ನು ಹಾಡಿದರು. ಅಂತಿಮವಾಗಿ ಪ್ರಸಾದವನ್ನು ವಿತರಿಸಲಾಯಿತು.

Scroll to Top