Vishnu Sahasranama Parayana program in RVK – Banashankari

Bengaluru, Mar 8: A Vishnu Sahasranama Parayana program was organized for the mothers of Matrubharati herein Rashtrotthana Vidya Kendra – Banashankari. As a preliminary preparation for this program, a Vishnu Sahasranama class was organized online from November 2024 to January 2025. One of the mothers of Matrubharati, Smt. Manjula Naidu, taught the Vishnu Sahasranama to the mothers in a very meaningful way. As a conclusion to these classes, a Vishnu Sahasranama Parayana was organized. The program was auspicious by offering pooja to the portrait of Lord Sri Satyanarayana. Many mothers of the Matrubharati team took advantage of the Vishnu Sahasranama class and actively participated in the parayana.

ಬೆಂಗಳೂರು, ಮಾ. 8: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಮಾತೃಭಾರತಿಯ ಮಾತೆಯರಿಗಾಗಿ ವಿಷ್ಣು ಸಹಸ್ರನಾಮ ಪಾರಾಯಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಪೂರ್ವಭಾವಿ ಸಿದ್ಧತೆಯಾಗಿ 2024 ನವೆಂಬರ್ ತಿಂಗಳಿನಿಂದ 2025 ಜನವರಿ ತಿಂಗಳ ತನಕ ವಿಷ್ಣು ಸಹಸ್ರನಾಮ ತರಗತಿಯನ್ನು ಆನ್ಲೈನ್ನಲ್ಲಿ ಏರ್ಪಡಿಸಲಾಗಿತ್ತು. ಮಾತೃಭಾರತಿಯ ಮಾತೆಯರಲ್ಲಿ ಒಬ್ಬರಾದ ಶ್ರೀಮತಿ ಮಂಜುಳಾ ನಾಯ್ಡು ಅವರು ವಿಷ್ಣು ಸಹಸ್ರನಾಮವನ್ನು ಬಹಳ ಅರ್ಥಪೂರ್ಣವಾಗಿ ಮಾತೆಯರಿಗೆ ಕಲ್ಪಿಸಿದರು. ಈ ತರಗತಿಗಳ ಸಮಾರೋಪದ ರೂಪದಲ್ಲಿ ವಿಷ್ಣು ಸಹಸ್ರನಾಮ ಪಾರಾಯಣವನ್ನು ಏರ್ಪಡಿಸಲಾಗಿತ್ತು. ಭಗವಾನ್ ಶ್ರೀ ಸತ್ಯನಾರಾಯಣನ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಮಾತೃಭಾರತಿಯ ತಂಡದ ಅನೇಕ ಮಾತೆಯರು ವಿಷ್ಣು ಸಹಸ್ರನಾಮ ತರಗತಿಯ ಸದುಪಯೋಗವನ್ನು ಪಡೆದುಕೊಂಡು ಪಾರಾಯಣದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.

Scroll to Top