Walkathon & Cyclothon by RVK – Banashankari

Bengaluru, June 8: On the occasion of World Environment Day and Intranational Day of Yoga, Walkathon and Cyclothon were organised by Rashtrotthana Vidya Kendra – Banashankari.

Sub Inspector of Kengeri Police Station, Sri Hanumanta launched the Jatha near Aditya Bakery. Later, a procession was conducted up to Rashtrotthana Hospital in Rajarajeshwari Nagar. School students, NCC cadets, teachers and many parents enthusiastically participated in the Jatha. In the program held in the premises of the Hospital, the Vice Principal of the School, Smt. Nanda Mataji and the Medical Administrator of the Hospital, Dr. Shaila H N were present. There were lectures on danger of plastic, healthy lifestyle, soil pollution control, waste management etc, drama and yoga dance presentations.

ಬೆಂಗಳೂರು, ಜೂನ್ 8: ರಾಷ್ಟ್ರೋತ್ಥನ ವಿದ್ಯಾಕೇಂದ್ರ – ಬನಶಂಕರಿಯವರು ವಿಶ್ವ ಪರಿಸರ ದಿನ ಹಾಗೂ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ನಿಮಿತ್ತ ವಾಕಥಾನ್ ಹಾಗೂ ಸೈಕ್ಲೋಥಾನನ್ನು ಆಯೋಜಿಸಿತ್ತು.

ಕೆಂಗೇರಿ ಪೊಲೀಸ್ ಠಾಣೆಯ ಉಪನಿರೀಕ್ಷಕ, ಶ್ರೀ ಹನುಮಂತ ಅವರು ಆದಿತ್ಯ ಬೇಕರಿಯ ಸಮೀಪದಲ್ಲಿ ಜಾಥಾಕ್ಕೆ ಚಾಲನೆ ನೀಡಿದರು. ನಂತರ ರಾಜರಾಜೇಶ್ವರಿ ನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯವರೆಗೆ ಜಾಥಾವನ್ನು ನಡೆಸಲಾಯಿತು. ಜಾಥಾದಲ್ಲಿ ಶಾಲೆಯ ವಿದ್ಯಾರ್ಥಿಗಳು, ಎನ್‌ಸಿಸಿ ಕೆಡೆಟ್‌ಗಳು, ಶಿಕ್ಷಕರು ಹಾಗೂ ಹಲವಾರು ಪೋಷಕರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಆಸ್ಪತ್ರೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲೆಯ ಉಪಪ್ರಧಾನಾಚಾರ್ಯರಾದ ಶ್ರೀಮತಿ ನಂದ ಮಾತಾಜೀ ಹಾಗೂ ಆಸ್ಪತ್ರೆಯ ವೈದ್ಯಕೀಯ ಆಡಳಿತಾಧಿಕಾರಿ, ಡಾ. ಶೈಲಾ ಎಚ್‌ ಎನ್ ಉಪಸ್ಥಿತರಿದ್ದರು. ಪ್ಲಾಷ್ಟಿಕ್‌ನ ಅಪಾಯ, ಆರೋಗ್ಯಕರ ಜೀವನಶೈಲಿ, ಮಣ್ಣಿನ ಮಾಲಿನ್ಯ ನಿಯಂತ್ರಣ, ತ್ಯಾಜ್ಯ ನಿರ್ವಹಣೆ ಮೊದಲಾದ ವಿಷಯಗಳ ಬಗೆಗೆ ಉಪನ್ಯಾಸ, ನಾಟಕ ಹಾಗೂ ಯೋಗ ನೃತ್ಯದ ಪ್ರಸ್ತುತಿ ಇತ್ತು.

Scroll to Top