Bengaluru, Nov. 1: The 71st Karnataka Rajyotsava, a celebration of ‘Kannadambe’ (Mother Kannada) was celebrated with great enthusiasm at Rashtrotthana Vidya Kendra – Banashankari.

  • Yellow and red flags fluttered throughout the school premises. Teachers, students, and staff members were all dressed in yellow and red attire. The school campus looked vibrant, adorned with yellow and red rangoli designs and decorative festoons made of fresh green leaves.
  • Dr. Na. Someshwar (author and host of the popular show ‘That Antha Heli’) attended the event as the Chief Guest.
  • The Chief Guest and the school principal hoisted the national flag and the state flag, accompanied by the national anthem and the state anthem. Everyone present, teachers and students alike, joined in, paying their respects to the flags.
  • During the cultural program, students delivered impressive dance performances set to Kannada folk songs.
  • Through the rendition of a raitha geethe (farmer’s song) they paid tribute to the farmers who provide us with food.
  • Students performed a short play highlighting the significance of the Kannada language and the necessity of preserving it.
  • The children performed dances accompanied by live singing.
  • In his address, the chief guest, Dr. Na. Someshwar, explained the distinction between ‘Karnataka’ and ‘Kannada Rajyotsava’. 

The children were asked about the origin of the name ‘Karnataka’. Those who provided the correct answer were rewarded with books. The importance of our language was highlighted, and a few examples were shared to illustrate the beauty of the Kannada language. It was suggested that to preserve Kannada, we must all use the language daily. Furthermore, the children were encouraged to continuously learn new words, phrases, proverbs, and riddles.

 


ಬೆಂಗಳೂರು, ನ. 1: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಕನ್ನಡಾಂಬೆಯ ಉತ್ಸವವಾದ 71 ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. 

  • ಶಾಲೆಯ ಆವರಣದಲ್ಲಿ ಎಲ್ಲೆಲ್ಲೂ ಹಳದಿ ಕೆಂಪು ಬಣ್ಣದ ಬಾವುಟಗಳು ರಾರಾಜಿಸುತ್ತಿದ್ದವು. ಎಲ್ಲಾ ಶಿಕ್ಷಕರು. ಮಕ್ಕಳು, ಸಿಬ್ಬಂದಿ ವರ್ಗದವರು ಹಳದಿ ಕೆಂಪು ಬಣ್ಣದ ಉಡುಗೆಯನ್ನು ತೊಟ್ಟಿದ್ದರು. ಶಾಲೆಯ ಪರಿಸರ ಹಳದಿ ಕೆಂಪು ಬಣ್ಣದ ರಂಗವಲ್ಲಿ ಮತ್ತು ತಳಿರು ತೋರಣಗಳಿಂದ ಕಂಗೊಳಿಸುತ್ತಿದ್ದವು.
  • ಕಾರ್ಯಕ್ರಮಕ್ಕೆ ಡಾ. ನಾ ಸೋಮೇಶ್ವರ್ (ಲೇಖಕರು, ಹಾಗೂ ಥಟ್ ಅಂತ ಹೇಳಿ ಕಾರ್ಯಕ್ರಮದ ನಿರೂಪಕರು) ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. 
  • ಮುಖ್ಯ ಅತಿಥಿಗಳು ಮತ್ತು ನಮ್ಮ ಶಾಲೆಯ ಪ್ರಧಾನಾಚಾರ್ಯರು ರಾಷ್ಟ್ರಧ್ವಜ ಮತ್ತು ನಾಡಧ್ವಜಾರೋಹಣವನ್ನು ರಾಷ್ಟ್ರಗೀತೆ ಮತ್ತು ನಾಡಗೀತೆಯೊಂದಿಗೆ ನೆರವೇರಿಸಿದರು. ಶಿಕ್ಷಕರು, ಮಕ್ಕಳು ಸೇರಿದಂತೆ ಎಲ್ಲರೂ ದನಿಗೂಡಿಸಿ ಧ್ವಜಕ್ಕೆ ಗೌರವ ಸಲ್ಲಿಸಿದರು.
  • ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕನ್ನಡ ಜನಪದ ಹಾಡುಗಳಿಗೆ ಅಮೋಘವಾಗಿ ನೃತ್ಯ ಮಾಡುತ್ತಾ ಹೆಜ್ಜೆ ಹಾಕಿದರು.
  • ರೈತ ಗೀತೆಯನ್ನು ಹಾಡುವುದರೊಂದಿಗೆ ಅನ್ನ ನೀಡುವ ರೈತನಿಗೆ ನಮನ ಸಲ್ಲಿಸಿದರು. 
  • ಕನ್ನಡ ಭಾಷೆಯ ಮಹತ್ವವನ್ನು ಮತ್ತು ಅದರ ಉಳಿಸುವಿಕೆಯ ಅಗತ್ಯತೆ ಕುರಿತಂತೆ ಕಿರು ನಾಟಕವನ್ನು ವಿದ್ಯಾರ್ಥಿಗಳು ಅಭಿನಯಿಸಿದರು.
  • ಮಕ್ಕಳು ನೇರ ಗಾಯನದೊಂದಿಗೆ, ನೃತ್ಯ ಮಾಡಿದರು. 
  • ಮುಖ್ಯ ಅತಿಥಿಗಳಾದ ಡಾ. ನಾ ಸೋಮೇಶ್ವರ್ ರವರು ಮಾತನಾಡುತ್ತಾ ಕರ್ನಾಟಕ ಮತ್ತು ಕನ್ನಡ ರಾಜ್ಯೋತ್ಸವಕ್ಕೆ ಇರುವ ವ್ಯತ್ಯಾಸವನ್ನು ತಿಳಿಸಿದರು. 
  • ಕರ್ನಾಟಕ ಎಂಬ ಹೆಸರು ಬರಲು ಕಾರಣವನ್ನು ಮಕ್ಕಳಿಗೆ ಕೇಳಿದರು. ಸರಿ ಉತ್ತರವನ್ನು ನೀಡಿದ ಮಕ್ಕಳಿಗೆ ಪುಸ್ತಕಗಳನ್ನು ಬಹುಮಾನವಾಗಿ ನೀಡಿದರು. ನಮ್ಮ ಭಾಷೆಯ ಮಹತ್ವವನ್ನು ತಿಳಿಸಿದರು. ಕನ್ನಡ ಭಾಷೆ ಅಂದದ ಭಾಷೆ ಎಂದು ಸಾಂದರ್ಭಿಕವಾಗಿ ಒಂದೆರಡು ಉದಾಹರಣೆಗಳನ್ನು ನೀಡಿದರು. ಕನ್ನಡ ಭಾಷೆಯನ್ನು ಉಳಿಸಲು ನಾವೆಲ್ಲರೂ ಪ್ರತಿದಿನ ಕನ್ನಡ ಭಾಷೆಯನ್ನು ಬಳಸಬೇಕು. ಹೊಸ ಹೊಸ ಶಬ್ದಗಳನ್ನು, ನುಡಿಗಟ್ಟುಗಳನ್ನು, ಗಾದೆ ಹಾಗೂ ಒಗಟುಗಳನ್ನು ಕಲಿಯುತ್ತಾ ಹೋಗಬೇಕು ಎಂದು ಸಲಹೆ ನೀಡಿದರು.