Thon Trios by RVK – Banashankari
ಬೆಂಗಳೂರು, ಜೂನ್ 10: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯು ವಿಶ್ವ ಪರಿಸರ ಹಾಗೂ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ನಿಮಿತ್ತ ವಾಕಥಾನ್, ಸೈಕ್ಲೋಥಾನ್ ಹಾಗೂ ಯೋಗಥಾನ್ಗಳನ್ನು ಆಯೋಜಿಸಿಲಾಗಿತ್ತು. ಆದಿತ್ಯ ಬೇಕರಿಯಿಂದ ಪ್ರಾರಂಭವಾದ ಈ ಥಾನ್ ತ್ರಯಗಳು ರಾಜರಾಜೇಶ್ವರೀ ನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯವರೆಗೆ, ಸುಮಾರು 3.5 ಕಿಮೀಯಷ್ಟು ಸಾಗಿತು.
Bengaluru, June 10: Rashtrothana Vidya Kendra – Banashankari organized Walkathon, Cyclothon and Yogathon on the occasion of World Environment and International Yoga Day. Starting from Aditya Bakery, these Thon trios proceeded to the Rashtraththana Hospital in Rajarajeshwari Nagar, a distance of about 3.5 km.
ಆದಿತ್ಯ ಬೇಕರಿಯ ಸಮೀಪ ಶ್ರೀ ಸಂಜೀವ್ ಗೌಡ, ಪೊಲೀಸ್ ಇನ್ಸ್ಪೆಕ್ಟರ್, ಕೆಂಗೇರಿ, ಇವರು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎನ್ನುವ ಗಾದೆ ಮಾತಿನಂತೆ ಮಕ್ಕಳು ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಂಡು, ಒಳ್ಳೆಯ ಪ್ರಜೆಗಳಾಗಿ ದೇಶವನ್ನು ಪ್ಲಾಸ್ಟಿಕ್ ಮುಕ್ತ ಆಗಿಸುವ ಬಗೆಗೆ ಕಾರ್ಯಪ್ರವೃತ್ತರಾಗಬೇಕು ಎಂದರು.
ಯೋಗಪಟುಗಳು ಯೋಗ ಪ್ರದರ್ಶನ ಮಾಡಿದರು. ಅಲ್ಲಿಂದ 3.5 ಕಿಮೀ ಸಾಗಿದ ನಂತರದಲ್ಲಿ ರಾಷ್ಟ್ರೋತ್ಥಾನ ಆಸ್ಪತ್ರೆಯ ವೈದ್ಯರು ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ವೈದ್ಯರಾದ ಶ್ರೀ ಆನಂದ್ ಅವರು ರಾಷ್ಟ್ರೋತ್ಥಾನ ಶಾಲೆಯಲ್ಲಿ ಮಕ್ಕಳಿಗೆ ಆರೋಗ್ಯ, ಸಂಸ್ಕೃತಿ, ಪರಿಸರ,ಯೋಗಕ್ಕೆ ಸಂಬಂಧಿಸಿದ ಚಟುವಟಿಕೆಗಳು ನಡೆಯುತ್ತಲಿವೆ. ಪೋಷಕರು ಸಹ ಅವುಗಳನ್ನು ಅಳವಡಿಸಿಕೊಂಡರೆ ಉತ್ತಮವಾಗಿರುತ್ತದೆ ಎಂದರು.
ಆರಕ್ಷಕರು, ವೈದ್ಯರು, ಆಸ್ಪತ್ರೆಯ ಸಿಬ್ಬಂದಿ ವರ್ಗದವರು, ಶಾಲೆಯ ಪ್ರಧಾನಚಾರ್ಯರು, ಶಿಕ್ಷಕ ವೃಂದದವರು, ಪೋಷಕರು ಹಾಗೂ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.