18 to 20 05 23 rvk teachers orientation program @ rvk banashankari

ಶಿಕ್ಷಕರ ಪುನಶ್ಚೇತನ ಕಾರ್ಯಗಾರವನ್ನು  ದೀಪಪ್ರಜ್ವಲನೆಯ  ಮೂಲಕ ಪ್ರಾರಂಭಿಸಲಾಯಿತು. ಕಾರ್ಯಗಾರವನ್ನು ರಾಷ್ಟ್ರೋತ್ಥಾನ ಪರಿಷತ್ತಿನ ಕಾರ್ಯದರ್ಶಿಗಳಾದ ದಿನೇಶ್ ಹೆಗಡೆಯವರು ಹಾಗೂ ಬೆಂಗಳೂರು ರಾಷ್ಟ್ರೋತ್ಥಾನ ಶಾಲೆಯ  ಬಾತ್ಮೀದಾರರಾದ  ರಾಜೇಶ್‌ ದೇಶಮುಖ್ ರವರು ಹಾಗೂ ನಮ್ಮ ಶಾಲೆಯ ಪ್ರಾಂಶುಪಾಲರಾದ ವಸಂತ್ ಕುಮಾರ್ ಗುರೂಜಿಯವರು ಕಾರ್ಯಗಾರದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಿನೇಶ್ ಹೆಗಡೆ ವಹಿಸಿದ್ದರು. ಪ್ರಾಸ್ತಾವಿಕ ನುಡಿ ವಸಂತ್ ಕುಮಾರ್ ಗುರೂಜಿಯವರಿಂದ.

ನಂತರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ದಿನೇಶ್ ಹೆಗಡೆಯವರು ಮೋದಿಜಿ ಯವರ ಅನುಭವವನ್ನು ಹಂಚಿಕೊಂಡರು. ಶಿಕ್ಷಕ ಕೇವಲ ಬೋಧಕನಾಗಿರಬಾರದು, ಆಚಾರ್ಯನಾಗಬೇಕು ಎಂದು ತಿಳಿಸಿದರು ಬೋಧನೆ ಪರಿಣಾಮಕಾರಿಯಾಬೇಕಾದರೆ, ಭಾವನಾತ್ಮಕವಾಗಬೇಕು ಎಂದು ಹಲವಾರು ನಿದರ್ಶನಗಳ ಮೂಲಕ ತಿಳಿಸಿದರು.

ಎರಡನೆಯ ಅವಧಿಯಲ್ಲಿ ನಾಗೇಂದ್ರರಾವ್ ರವರು ರಾಮತೀರ್ಥರ ಬಗ್ಗೆ ಮಾತನಾಡಿದರು. ನಂತರದ ಅವಧಿಯನ್ನು ರವಿಕುಮಾರ್ ಗುರೂಜಿಯವರು ನಡೆಸಿಕೊಟ್ಟರು ಇವರು ಉತ್ಕೃಷ್ಟ ಮಾದರಿಯ ಶಿಕ್ಷಣದ ಅಳವಡಿಕೆಯ ಬಗ್ಗೆ ತಿಳಿಸುತ್ತಾ ಉತ್ಕೃಷ್ಟ ಗುಣಮಟ್ಟದ ಶಿಕ್ಷಣ, ಶಿಕ್ಷಕ, ಪೋಷಕ, ಸಮಾಜ ಇದರ ಬಗ್ಗೆ ತಿಳಿಸಿದರು. ಸ್ವಸ್ಥ ಸುಸ್ಥಿರ ಸಮಾಜ ನಿರ್ಮಾಣ ನಮ್ಮ ಗುರಿ ಎಂದು ತಿಳಿಸಿದರು.

ನಾಲ್ಕನೆಯ ಅವಧಿಯನ್ನು ಕಲ್ಲೇಶಪ್ಪನವರು ಕನ್ನಡ ವಿಭಾಗಕ್ಕೆ,ಹಿಂದಿ ವಿಭಾಗಕ್ಕೆ ಕಲ್ಪನಾ ಶುಕ್ಲ ಹಾಗೂ ಸಂಸ್ಕೃತ ವಿಭಾಗಕ್ಕೆವಿನಾಯಕ ಭಟ್ಟ್ ತೆಗೆದುಕೊಂಡರು. ಇವರು ಉತ್ಕೃಷ್ಟ ಮಾದರಿಯನ್ನು ಸಾಧಿಸಲು ಭಾಷಾ ಕೌಶಲ್ಯಗಳು ಹೇಗೆ ಸಹಾಯಕ ಎಂಬುದನ್ನು ತಿಳಿಸಿದರು. ಕೌಶಲ್ಯಗಳಾದ ಆಲಿಸುವಿಕೆ ಮಾತುಗಾರಿಕೆ ,ಓದುಗಾರಿಕೆ ಹಾಗೂ ಬರವಣಿಗೆ ಇವುಗಳನ್ನು ಮಕ್ಕಳಲ್ಲಿ ಅಭಿವೃದ್ಧಿಪಡಿಸಲು ಕೈಗೊಳ್ಳಬಹುದಾದ ಚಟುವಟಿಕೆಗಳ ಬಗ್ಗೆ ಚರ್ಚಿಸಿದರು. ಮೊದಲನೆಯ ದಿನದ ಎಲ್ಲಾ ಕಾರ್ಯಕ್ರಮಗಳನ್ನು ಬನಶಂಕರಿ ಶಾಲೆಯಿಂದ ಹಮ್ಮಿಕೊಳ್ಳಲಾಯಿತು.

ಎರಡನೆಯ ದಿನದ ಕಾರ್ಯಕ್ರಮವನ್ನು ಜೆ ಜಿ ಆರ್ ವಿ ಕೆ ಶಾಲೆಯ ಶಿಕ್ಷಕರು ನಡೆಸಿಕೊಟ್ಟರು. ಪ್ರಾರ್ಥನೆಯ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ನಂತರ ಸಂಸ್ಕೃತ ಮುಖ್ಯಸ್ಥರಾದ ವಿನಾಯಕ ಭಟ್ಟ ಅವರು ಭಾರತೀಯ ಸಂಸ್ಕೃತಿಯ ಬಗ್ಗೆ ತಿಳಿಸಿಕೊಟ್ಟರು. ಸಂಸ್ಕೃತಿ, ಭಾರತೀಯ ಸಂಸ್ಕೃತಿ,  ವರ್ಣಾಶ್ರಮ ಹಾಗೂ ಚತುರಾಶ್ರಮ ಈ ವಿಷಯಗಳ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು.

ನಂತರ ವಿಷಯಧಾರಿತ ಅವಧಿಗಳು ಮುಂದುವರಿದವು ಕನ್ನಡ ಭಾಷೆಗೆ ರೇಣುಕ ಪ್ರಸಾದ್‌, ಇಂಗ್ಲಿಷ್ ಭಾಷೆಗೆಶ್ರೀದೇವಿ, ಹಿಂದಿ ಭಾಷೆಗೆ ಚಾರುಮತಿ ದೇಸಾಯಿ ಹಾಗೂ ಸಂಸ್ಕೃತಕ್ಕೆತಿರುಮಲಚಾರ್ಯ ಸಂಪನ್ಮೂಲ ವ್ಯಕ್ತಿಗಳು ಆಗಮಿಸಿದ್ದರು. ಭಾಷೆಯ ಬಗ್ಗೆ ಸಾಮರ್ಥ್ಯಾಧಾರಿತ ಶಿಕ್ಷಣವನ್ನು ನೀಡಲು ಭಾಷೆಯನ್ನು ವ್ಯಾಕರಣ ಉಚ್ಚಾರ ಅರ್ಥ ಸಂದರ್ಭ ಜೊತೆಗೆ ಪೂರಕ ಅಂಶಗಳು ಬಗ್ಗೆ ತಿಳಿಸಿದರು.

ಮೂರನೇ ದಿನದ ಶಿಕ್ಷಕ ಪುನಶ್ಚೇತನ ಕಾರ್ಯಗಾರವನ್ನು ಥಣಿಸಂದ್ರ ಶಾಲೆಯ ಶಿಕ್ಷಕರು ನಡೆಸಿಕೊಟ್ಟರು. ಅಂದು ಸಹ ಪ್ರಾರ್ಥನೆಯ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು . ನಮ್ಮ ಶಾಲೆಯ ವಸಂತ್ ಕುಮಾರ್ ಗುರೂಜಿ ಯವರು ಶೈಕ್ಷಣಿಕ ಗುರಿಗಳ (ಗೋಲ್ಸ್) ಬಗ್ಗೆ  ವಿವರವಾಗಿ ತಿಳಿಸಿಕೊಟ್ಟರು.

ಮೂರನೇ ಅವಧಿಯನ್ನು ಮಹೇಶ್ವರಯ್ಯ ನವರು ತೆಗೆದುಕೊಂಡರು ಇವರು ಅಂದು ಶಿಕ್ಷಣ ವೈದಿಕ ಶಿಕ್ಷಣ ,ಮುಸ್ಲಿಂಶಿಕ್ಷಣ ಬ್ರಿಟಿಷರ ಶಿಕ್ಷಣ ಹಾಗೂ ಮುಂದಿನ ಶಿಕ್ಷಣದ ಬಗ್ಗೆ ಚರ್ಚಿಸಿದರು.(ಅಂದು-ಇಂದು-ಮುಂದು ಶಿಕ್ಷಣ ವ್ಯವಸ್ಥೆ)

ನಂತರ ಸಮಾರೋಪ ಸಮಾರಂಭವು 4:30 ರಿಂದ 5:30ರ ವರೆಗೆ ನೆರವೇರಿತು ಪ್ರತಿ ಭಾಷೆಯ ಅನಿಸಿಕೆ ಅಭಿಪ್ರಾಯವನ್ನು ಹಂಚಿಕೊಂಡರು. ಎಲ್ಲರೂ ಸಹ ಈ ಬಾರಿಯ ಕಾರ್ಯಗಾರದಲ್ಲಿ ಉತ್ತಮವಾದ ಊಟದ ವ್ಯವಸ್ಥೆ ಇತ್ತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಒಟ್ಟಿನಲ್ಲಿ ಮೂರುದಿನದ ಕಾರ್ಯಗಾರವು ಉತ್ತಮವಾಗಿದ್ದು ಶಿಕ್ಷಕರಿಗೆ ಜ್ಞಾನವನ್ನು ನೀಡುವುದರ ಜೊತೆಗೆ ಅವರ ಜವಾಬ್ದಾರಿಯನ್ನು ಸಹ ಮನವರಿಕೆ ಮಾಡಲಾಯಿತು. ಧನ್ಯವಾದಗಳು

Scroll to Top