28 05 23 aksharabhyasa & vidyarambha @ rvk banashankari

ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಬನಶಂಕರಿ ಶಾಲೆಯಲ್ಲಿ ದಿನಾಂಕ 28.05.2023ರ ಶ್ರೀ ಶೋಭಕೃತ್‌ ನಾಮ ಸಂವತ್ಸರ ಜೇಷ್ಠ-ಶುಕ್ಲ ಪಕ್ಷ ಅಷ್ಟಮಿಯ ಭಾನುವಾರದಂದು ಪೂರ್ವಪ್ರಾಥಮಿಕ ಶಾಲಾ ಮಕ್ಕಳಿಗೆ ಹಾಗೂ ಹೊಸದಾಗಿ ಶಾಲೆಗೆ ಸೇರಿರುವ ಎಲ್‌. ಕೆ.ಜಿ. ಯಿಂದ 12ನೆಯ ತರಗತಿಯ ಮಕ್ಕಳಿಗೆ ಇಂದು ಅಕ್ಷರಾಭ್ಯಾಸ ಮತ್ತು ವಿದ್ಯಾರಂಭ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದ ನಿಮಿತ್ತ ಶಾಲೆಯನ್ನು ತಳಿರು ತೋರಣ ಹಾಗೂ ಹೂಗಳಿಂದ ಅಲಂಕರಿಸಲಾಗಿತ್ತು. ಗಣಪತಿ ಹೋಮದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ನಂತರ ಸರಸ್ವತಿದೇವಿಯನ್ನು ಪೂಜಿಸಲಾಯಿತು.ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಹಾಗೂ ಪ್ರೊಫೆಸರ್ ಪಿ. ರಂಗರಾಜನ್ ಭಾರತ ಮಾತಾ ಮಂದಿರ ಕೆ. ಆರ್. ಪುರಂ ಆಶ್ರಮದ ಸ್ಥಾಪಕರು ಮತ್ತು ಮಾಧವ ಹೆಬ್ಬಾರ್ ಸ್ವಯಂಸೇವಕರು(ಕರ್ನಾಟಕ ದಕ್ಷಿಣ ಪ್ರಾಂತ) ಹಾಗೂ ಜಿ..ಕೆ.ಶೆಣೈ ನಮ್ಮಶಾಲೆಯ ಕಾರ್ಯದರ್ಶಿಗಳು ಹಾಗೂ ನಮ್ಮ ಶಾಲೆಯ ಪ್ರಧಾನಚಾರ್ಯರಾದ ವಸಂತ್‌ ಕುಮಾರ್‌ ಗುರೂಜಿ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳನ್ನು ಪೂರ್ಣ ಕುಂಬದೊಂದಿಗೆ ವೇದಿಕೆಗೆ ಬರಮಾಡಿಕೊಳ್ಳಲಾಯಿತು. ಶಾಲೆಯ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಶ್ರೀಮತಿ ಪ್ರಣೀತಾ, ಪ್ರಮುಖ್‌ ಬುನಾದಿ(Foundational leve. Co ordinator) ಹಂತ ಸ್ವಾಗತ ಮತ್ತು ಅತಿಥಿಗಳ ಪರಿಚಯ ಮಾಡಿದರು. ಶ್ರೀ ಮಾಧವ ಹೆಬ್ಬಾರ್ ರವರು ರಾಷ್ಟ್ರೋತ್ಥಾನ ಪರಿಷತ್ ಮತ್ತು ಅದರ ಕಾರ್ಯವನ್ನು ಸಂಕ್ಷಿಪ್ತವಾಗಿ ವಿವರಿಸಿದರು. ನಂತರ ಸಾಧು ಪ್ರೊಫೆಸರ್ ಪಿ ರಂಗರಾಜನ್ ರವರು ಹಿಂದೂ ಧರ್ಮ ಹಾಗೂ ಸಂಸ್ಕೃತಿಯ ಬಗ್ಗೆ ಮಾತಾನಾಡಿದರು ಹಾಗೂ ಹಲವಾರು ಶ್ಲೋಕಗಳನ್ನು ಹೇಳಿ ಅವುಗಳ ಅರ್ಥವನ್ನು ವಿವರಿಸಿದರು ಅವರು ಪೋಷಕರಿಗೂ ಶಿಕ್ಷಕರಿಗೂ ಹಿತವಚನ ನೀಡಿದರು ನಂತರ ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಮಾಡಿಸಿದರು.ಶ್ರೀಮತಿ ಸುಷ್ಮಾ ಪಾಟೀಲ್ ರವರು ವಂದನಾರ್ಪಣೆಯನ್ನು ಮಾಡಿದರು.ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ ಉಪಪ್ರಧಾನಚಾರ್ಯರು, ಸಂಯೋಜಕರು ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು. ಎಲ್ಲಾ ಪೋಷಕರು, ಮಕ್ಕಳು ಮತ್ತು ಶಾಲಾ ಸಿಬ್ಬಂದಿಯವರು ಸ್ವಾಮೀಜಿ ಯಿಂದ ಆಶೀರ್ವಾದ ಮತ್ತು ಪ್ರಸಾದವನ್ನು ಪಡೆದರು. ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಉಡುಗೊರೆ ಮತ್ತು ಪ್ರಸಾದವನ್ನು ನೀಡಲಾಯಿತು ಪೋಷಕರು ಮತ್ತು ಮಕ್ಕಳು ಅತ್ಯಂತ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾರ್ಯಕ್ರಮವು ಶಾಂತಿ ಮಂತ್ರ ಮತ್ತು ಪ್ರಸಾದ ವಿನಿಯೋಗದೊಂದಿಗೆ ಮುಕ್ತಾಯವಾಯಿತು.

Scroll to Top