Bengaluru, Mar 25: Holi was celebrated with gaiety herein Rashtrotthana Vidya Kendra – Banashankari.
ಬೆಂಗಳೂರು, ಮಾರ್ಚ್ 25: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಹೋಳೀ ಹಬ್ಬವನ್ನು ಸಂಭ್ರಮೋಲ್ಲಾಸಗಳಿಂದ ಆಚರಿಸಲಾಯಿತು.
ಮಕ್ಕಳು ಬಣ್ಣ-ಬಣ್ಣದ ಉಡುಗೆ ತೊಟ್ಟು ಹಬ್ಬವನ್ನು ಆಚರಿಸಿದರು. ಫಾಲ್ಗುಣ ಪೌರ್ಣಿಮೆಯಂದು ಹೋಳೀ ಹಬ್ಬವನ್ನು ಆಚರಿಸುತ್ತಾರೆ. ಇದನ್ನು ಕಾಮನ ಹಬ್ಬ ಎಂದೂ ಕರೆಯುತ್ತಾರೆ. ಭಾರತದಾದ್ಯಂತ, ಅದರಲ್ಲೂ ಉತ್ತರ ಭಾರತದಲ್ಲಿ ಹೋಳೀ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ. ಎಲ್ಲರೂ ಒಗ್ಗಟ್ಟಿನಿಂದ ಬಣ್ಣಗಳ ಓಕುಳಿ ಆಟದಲ್ಲಿ ಮಿಂದೇಳುತ್ತಾರೆ. ಈ ಹಬ್ಬವು ವಸಂತನ ಆಗಮನವನ್ನು ಸಾರುವ ಹಬ್ಬವಾಗಿದ್ದು, ಹಬ್ಬದ ಆಚರಣೆಯಲ್ಲಿ ಹೋಲಿಕಾ ದಹನವು ವಿಶೇಷವಾದದ್ದೆಂದು ಮಕ್ಕಳು ತಿಳಿಸಿಕೊಟ್ಟರು.