Bengaluru, May 26: ’Aksharabhyasa’ and ‘Vidyarambha’ program were organized herein Rashtrotthana Vidya Kendra – Banashankari, for pre-primary class children and for newly enrolled children from LKG to 12th class, respectively. As the part of the ceremony, Ganapati Havan and Saraswati puja were performed.
ಬೆಂಗಳೂರು, ಮೇ 26: ಆರ್.ವಿ.ಕೆ. ಬನಶಂಕರಿಯಲ್ಲಿ ಪೂರ್ವಪ್ರಾಥಮಿಕ ಶಾಲಾ ಮಕ್ಕಳಿಗೆ ಅಕ್ಷರಾಭ್ಯಾಸ ಹಾಗೂ ಎಲ್.ಕೆಜಿಯಿಂದ 12ನೇ ತರಗತಿಗೆ ಹೊಸದಾಗಿ ದಾಖಲಾದ ಮಕ್ಕಳಿಗೆ ವಿದ್ಯಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಗಣಪತಿ ಹವನ ಹಾಗೂ ಸರಸ್ವತಿ ಪೂಜೆಯನ್ನು ನಡೆಸಲಾಯಿತು.
Sri Sri Sri Madhusudanananda Puri Swamiji, the Pithadhipathi of Omkara Ashram Mahasansthan, made his presence and conducted the Aksharabhyasa ceremony for the Pre-KG children. He also recited the Shloka to commence the Vidyarambha of the children.
ಓಂಕಾರ ಆಶ್ರಮ ಮಹಾಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಮಧುಸೂದನಾನಂದ ಪುರಿ ಸ್ವಾಮಿಜೀಯವರು ಆಗಮಿಸಿ ಪ್ರೀ-ಕೆಜಿ ಮಕ್ಕಳಿಗೆ ಶಾಸ್ತ್ರೋಕ್ತವಾಗಿ ಅಕ್ಷರಾಭ್ಯಾಸ ಮಾಡಿಸಿದರು ಹಾಗೂ ಇತರ ಮಕ್ಕಳಿಗೆ ವಿದ್ಯಾರಂಭದ ಶ್ಲೋಕವನ್ನು ಹೇಳಿಕೊಟ್ಟರು.
Sri Maheswarayya, Chief Administrator of RVK CBSC Schools, was present.
ರಾಷ್ಟ್ರೋತ್ಥಾನದ ಸಿಬಿಎಸ್‌ಸಿ ಶಾಲೆಗಳ ಮುಖ್ಯ ಆಡಳಿತಾಧಿಕಾರಿಗಳಾದ ಶ್ರೀ ಮಹೇಶ್ವರಯ್ಯ ಉಪಸ್ಥಿತರಿದ್ದರು.
A well-rounded education holds great significance. Among the 64 rituals, only 16 have endured. It is crucial that we adhere to these traditions diligently in order to preserve the essence of Indian culture – Sri Sri Sri Madhusudanananda Puri Swamiji.
ಸಂಸ್ಕಾರಯುತ ಶಿಕ್ಷಣ ಬಹಳ ಮುಖ್ಯ. 64 ಸಂಸ್ಕಾರಗಳಲ್ಲಿ 16 ಸಂಸ್ಕಾರಗಳು ಉಳಿದುಕೊಂಡಿವೆ. ಅವುಗಳನ್ನು ಸರಿಯಾಗಿ ಪಾಲಿಸಿ ಭಾರತೀಯತೆಯನ್ನು ಉಳಿಸಿಕೊಳ್ಳೋಣ ಎಂದು ಶ್ರಿ ಶ್ರೀ ಶ್ರೀ ಮಧುಸೂದನಾನಂದ ಪುರಿ ಸ್ವಾಮೀಜಿ ಹೇಳಿದರು.