10th International Day of Yoga celebration in RVK – Banashankari

Bengaluru,June 21: The 10th International Day of Yoga was celebrated in Rashtrotthana Vidya Kendra – Banashankari under the theme ‘Yoga for Self and Society’. Dr. B R Ramakrishna, Prof. Chancellor, Swami Vivekananda Yoga Anusandhana Sansthana, was present as guest. Smt. Purnima, the Principal, preached Sankalpa. Students sang yoga song, gave speech on the importance of yoga.

The government school students from the surrounding area who had arrived for the program and the students of Banashankari Vidya Kendra performed various asanas jointly. Winner of various yoga competitions at the national level Ku. Kaustubh was honored.Sri Vasanth Kumar, Correspondent of Banashankari School, Sri Shivraj, Principal of Vijayanagara Rashtrotthana School, Government School children and teachers from Kengeri, Chikkegowdana Palya, Kengeri Upanagar, Kodipalya, Jattigarahalli, Gollahalli, were present. About 2500 people participated in the program.“Yoga is a way of life, an art of life, a science of life. Yoga should be done for health, happiness and harmony” – Dr. B R Ramakrishna

ಬೆಂಗಳೂರು, ಜೂನ್ 21: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ‘ಯೋಗ – ಸ್ವಂತಕ್ಕೆ ಮತ್ತು ಸಮಾಜಕ್ಕೆ’ ಎಂಬ ವಿಷಯದಡಿ ಅಂತಾರಾಷ್ಟ್ರೀಯ ಯೋಗದಿನವನ್ನು ಆಚರಿಸಲಾಯಿತು. ಡಾ. ಬಿ. ಆರ್. ರಾಮಕೃಷ್ಣ, ಉಪ-ಕುಲಾಧಿಪತಿಗಳು, ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ, ಅವರು ಅತಿಥಿಗಳಾಗಿ ಆಗಮಿಸಿದ್ದರು. ಪ್ರಧಾನಾಚಾರ್ಯರಾದ ಶ್ರೀಮತಿ ಪೂರ್ಣಿಮಾ ಅವರು ಸಂಕಲ್ಪವನ್ನು ಬೋಧಿಸಿದರು. ವಿದ್ಯಾರ್ಥಿಗಳು ಯೋಗಗೀತೆಯನ್ನು ಹಾಡಿದರು, ಯೋಗದ ಮಹತ್ತ್ವವನ್ನು ತಿಳಿಸಿದರು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಸುತ್ತಮುತ್ತಲಿನ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಹಾಗೂ ಬನಶಂಕರಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ವಿವಿಧಬಗೆಯ ಆಸನಗಳನ್ನು ಪ್ರದರ್ಶಿಸಿದರು. ರಾಷ್ಟ್ರೀಯ ಮಟ್ಟದಲ್ಲಿ ಯೋಗದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಕು. ಕೌಸ್ತುಭನನ್ನು ಗೌರವಿಸಲಾಯಿತು.ಬನಶಂಕರಿ ಶಾಲೆಯ ಬಾತ್ಮೀದಾರರಾದ ಶ್ರೀ ವಸಂತ್ ಕುಮಾರ್, ವಿಜಯನಗರ ರಾಷ್ಟ್ರೋತ್ಥಾನ ಶಾಲೆಯ ಪ್ರಧಾನಾಚಾರ್ಯ ಶ್ರೀ ಶಿವರಾಜ್, ಕೆಂಗೇರಿ, ಚಿಕ್ಕೇಗೌಡನ ಪಾಳ್ಯ, ಕೆಂಗೇರಿ ಉಪನಗರ, ಕೋಡಿಪಾಳ್ಯ, ಜಟ್ಟಿಗರಹಳ್ಳಿ,ಗೊಲ್ಲಹಳ್ಳಿಯ ಸರ್ಕಾರಿ ಶಾಲಾ ಮಕ್ಕಳು ಮತ್ತು ಶಿಕ್ಷಕರು ಉಪಸ್ಥಿತರಿದ್ದರು. ಸುಮಾರು 2500 ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. “ಯೋಗ ಎಂಬುದು ಜೀವನ ಶೈಲಿ, ಜೀವನ ಕಲೆ, ಜೀವನ ವಿಜ್ಞಾನವಾಗಿದೆ. ಸ್ವಾಸ್ಥ್ಯ, ಸಂತೋಷ, ಸಾಮರಸ್ಯಕ್ಕಾಗಿ ಯೋಗವನ್ನು ಮಾಡಬೇಕು” – ಡಾ. ಬಿ ಆರ್ ರಾಮಕೃಷ್ಣ

Scroll to Top