Bengaluru, July 25: Kargil Victory Day was celebrated herein Rashtrotthana Vidya Kendra – Banashankari. A wreath was placed at Amar Jawan’s portrait as a symbol of Kargil victory.Selected children of different classes did speech on the importance of celebrating Kargil Victory Day, the heroic deeds of the heroes who fought for the country and a short play depicting the life episode of Captain Manoj Kumar Pandey was performed to inculcate a deep sense of patriotism among the students.26th July is a day of pride for the whole country. Because on this same day in 1999, India won the Kargil war against Pakistan. In memory of this, ‘Kargil Vijay Divas’ is celebrated on 26th July every year. On this day, hundreds of Indian soldiers who died in the war are paid tributes.
ಬೆಂಗಳೂರು, ಜುಲೈ 25: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಯಿತು. ಕಾರ್ಗಿಲ್ ವಿಜಯದ ಸಂಕೇತವಾಗಿ ಅಮರ್ ಜವಾನ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ವಿವಿಧ ತರಗತಿಗಳ ಆಯ್ದ ಮಕ್ಕಳು ಕಾರ್ಗಿಲ್ ವಿಜಯ ದಿವಸವನ್ನು ಆಚರಿಸುವ ಮಹತ್ವವನ್ನು, ದೇಶಕ್ಕಾಗಿ ಹೋರಾಡಿದ ವೀರಯೋಧರ ಸಾಹಸವನ್ನು ಭಾಷಣದಲ್ಲಿ ತೆರೆದಿಟ್ಟರು ಹಾಗೂ ವಿದ್ಯಾರ್ಥಿಗಳಲ್ಲಿ ಆಳವಾದ ದೇಶಭಕ್ತಿಯ ಭಾವನೆಯನ್ನು ಮೂಡಿಸಲು ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ ಅವರ ಜೀವನದ ಪ್ರಸಂಗವನ್ನು ಬಿಂಬಿಸುವ ಕಿರುನಾಟಕವನ್ನು ಪ್ರದರ್ಶಿಸಲಾಯಿತು. ಜುಲೈ 26ರಂದು ಇಡೀ ದೇಶವೇ ಹೆಮ್ಮೆಪಡುವ ದಿವಸ. ಏಕೆಂದರೆ 1999ರ ಇದೇ ದಿನದಂದು ಪಾಕಿಸ್ತಾನದ ವಿರುದ್ಧ ಕಾರ್ಗಿಲ್ನಲ್ಲಿ ನಡೆದ ಯುದ್ಧದಲ್ಲಿ ಭಾರತ ಜಯ ಸಾಧಿಸಿದ ದಿವಸವಿದು. ಇದರ ನೆನಪಿಗಾಗಿ ಪ್ರತಿ ವರ್ಷ ಜುಲೈ 26ರಂದು ‘ಕಾರ್ಗಿಲ್ ವಿಜಯ್ ದಿವಸ್’ ಎಂದು ಆಚರಿಸಲಾಗುತ್ತದೆ. ಈ ದಿನದಂದು ಯುದ್ಧದಲ್ಲಿ ಹುತಾತ್ಮರಾದ ನೂರಾರು ಭಾರತೀಯ ಸೈನಿಕರಿಗೆ ಗೌರವ ನಮನಗಳನ್ನು ಸಲ್ಲಿಸಲಾಗುತ್ತದೆ.