Bengaluru, August 12: The great saint Sri Tulasidas and Dr. S. R. Ranganathan’s birthday was celebrated on National Librarians Day herein Rashtrotthana Vidya Kendra – Banashankari.Sri Tulasidas and Dr. S. R. Ranganathan’s portrait was laid with flowers.Then the students spoke about Tulsidas, a great devotee, philosopher, orator and author of Ramacharitamanasa, an epic poem and scripture dedicated to the Hindu god Rama. Also, students sang a song written by Sri Tulsidas melodiously. And Hanuman Chalisa was recited. Then the students recounted the life and accomplishments of Dr. S. R. Ranganathan, who was a distinguished researcher, mathematician, and national professor of library science in India.
ತಲೆ ತಗ್ಗಿಸಿ ನನ್ನನ್ನು ನೋಡು ನಾನು ನಿನ್ನನ್ನು ಸದಾ ತಲೆಯೆತ್ತುವಂತೆ ಮಾಡುತ್ತೇನೆ – ಪುಸ್ತಕ. ಬೆಂಗಳೂರು, ಆಗಸ್ಟ್ 12: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಮಹಾನ್ ಸಂತ ಶ್ರೀ ತುಲಸಿದಾಸರು ಹಾಗೂ ಡಾ. ಎಸ್. ಆರ್. ರಂಗನಾಥನ್ ಅವರ ಜನ್ಮದಿನದ ಪ್ರಯುಕ್ತ ಆಚರಿಸಲ್ಪಡುವ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯನ್ನು ಆಚರಿಸಲಾಯಿತು. ಶ್ರೀ ತುಲಸಿದಾಸರು ಹಾಗೂ ಡಾ. ಎಸ್. ಆರ್. ರಂಗನಾಥನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ನಂತರ ಮಹಾ ಭಕ್ತ, ತತ್ವಜ್ಞಾನಿ, ವಾಗ್ಗೇಯಕಾರ ಹಾಗೂ ಹಿಂದೂ ದೈವ ರಾಮನಿಗೆ ಅರ್ಪಿಸಿದ ಮಹಾಕಾವ್ಯ ಮತ್ತು ಧರ್ಮಗ್ರಂಥವಾದ ರಾಮಚರಿತಮಾನಸದ ಕೃತಿಕರ್ತ ಶ್ರೀ ತುಳಸಿದಾಸರ ಬಗ್ಗೆ ವಿದ್ಯಾರ್ಥಿಗಳು ಮಾತನಾಡಿದರು. ಹಾಗೆಯೇ ಶ್ರೀ ತುಳಸೀದಾಸರ ಒಂದು ಹಾಡನ್ನು ವಿದ್ಯಾರ್ಥಿಗಳು ಸುಶ್ರಾವ್ಯವಾಗಿ ಹಾಡಿದರು. ಮತ್ತು ಹನುಮಾನ್ ಚಾಲೀಸಾವನ್ನು ಪಠಿಸಲಾಯಿತು.ಸಂಶೋಧಕ, ಗಣಿತಜ್ಞ ಹಾಗೂ ಗ್ರಂಥಪಾಲಕ ಅಧ್ಯಾಪಕರಾಗಿದ್ದ ಡಾ. ಎಸ್. ಆರ್. ರಂಗನಾಥನ್ ಅವರ ಜೀವನ ಮತ್ತು ಸಾಧನೆಯನ್ನು ವಿದ್ಯಾರ್ಥಿಗಳು ತಿಳಿಸಿದರು. ಹಾಗೆಯೇ ರಾಷ್ಟ್ರೀಯ ಗ್ರಂಥಪಾಲಕರ ದಿನದ ಅಂಗವಾಗಿ ಇಂದಿನ ದಿನದ ಮೊದಲನೇ ಅವಧಿಯನ್ನು ವಿದ್ಯಾರ್ಥಿಗಳಿಗೆ ತಮಗಿಷ್ಟವಾದ ಪುಸ್ತಕ ಓದಲು ಅನುವು ಮಾಡಿಕೊಡಲಾಯಿತು.