Srujanotsava 2024-25 in RVK – Banashankari

“Events like Srujanotsava create activity and creativity in children” – Scientist Sri Ramkumar RV – Srujanotsava, RVK Banashankari.
Bengaluru, Aug 31: Srujanotsava was celebrated herein Rashtrotthana Vidya Kendra – Banashankari.Sri Ramkumar R V is a scientist at DRDO’s nodal agency CABS. He was the chief guest at the inaugural function of Srujanotsava. Following the inauguration of the program, students from grades 1 to 5 organized an exhibition within their respective classrooms. The children participated in the Srujanotsava, themed ‘One India’. This year, parents were encouraged to collaborate and engage in the Srujanotsava, making it a unique experience. Students in grades 6 to 10 showcased their models based on their specific subjects. The classrooms were arranged according to the subjects being presented. The Chief Guest visited all the rooms, examined the models created by the students, and expressed appreciation while attentively listening to the students’ explanations. Parents were invited to attend the event, and all of them came to the school to observe the children’s talent and creativity.

“ಸೃಜನೋತ್ಸವದಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಕ್ರಿಯಾಶೀಲತೆಯನ್ನು, ಸೃಜನಶೀಲತೆಯನ್ನು ಉಂಟುಮಾಡುತ್ತವೆ” – ವಿಜ್ಞಾನಿ ಶ್ರೀ ರಾಂಕುಮಾರ್ ಆರ್. ವಿ. – ರಾ.ವಿ.ಕೇ. – ಬನಶಂಕರಿ,
ಬೆಂಗಳೂರು, ಆಗಸ್ಟ್ 31: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಸೃಜನೋತ್ಸವವನ್ನು ಆಚರಿಸಲಾಯಿತು.ಡಿ.ಆರ್.ಡಿ.ಓ.ದ ನೋಡಲ್ ಏಜೆನ್ಸಿಯಾದ ಸಿಎಬಿಎಸ್ಇನಲ್ಲಿ ವಿಜ್ಞಾನಿಯಾಗಿರುವ ಶ್ರೀ ರಾಂಕುಮಾರ್ ಆರ್. ವಿ. ಅವರು ಸೃಜನೋತ್ಸವದ ಉದ್ಘಾಟನಾ ಸಮಾರಂಭದ ಮುಖ್ಯ ಅಭ್ಯಾಗತರಾಗಿದ್ದರು.ಕಾರ್ಯಕ್ರಮದ ಉದ್ಘಾಟನೆಯ ನಂತರ 1 ರಿಂದ 5 ನೇ ತರಗತಿಯ ವಿದ್ಯಾರ್ಥಿಗಳಿಗೆ ತಮ್ಮ ತಮ್ಮ ತರಗತಿಯಲ್ಲಿ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ‘ಒಂದೇ ಭಾರತ’ ಎಂಬ ವಿಷಯದಡಿಯಲ್ಲಿ ಮಕ್ಕಳು ಸೃಜನೋತ್ಸವದಲ್ಲಿ ಭಾಗವಹಿಸಿದ್ದರು. ಜೊತೆಗೆ ಪೋಷಕರು ಒಬ್ಬರಿಗೊಬ್ಬರು ಸಹಕರಿಸಿ ಸೃಜನೋತ್ಸವದಲ್ಲಿ ಭಾಗಿಯಾಗಲು ಅವಕಾಶ ನೀಡಿರುವುದು ಈ ವರ್ಷದ ವಿಶೇಷವಾಗಿತ್ತು. 6 ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ತಮ್ಮ ವಿಷಯಗಳಿಗನುಗುಣವಾಗಿ ತಾವು ತಯಾರಿಸಿದ ಮಾದರಿಗಳನ್ನು ಪ್ರದರ್ಶಿಸಿದರು. ವಿಷಯಾನುಸಾರ ವಿದ್ಯಾರ್ಥಿಗಳಿಗೆ ಕೊಠಡಿಗಳ ವ್ಯವಸ್ಥೆಯನ್ನು ಮಾಡಲಾಗಿತ್ತು. ಮುಖ್ಯ ಅಭ್ಯಾಗತರು ಎಲ್ಲಾ ಕೊಠಡಿಗಳಿಗೂ ಭೇಟಿ ನೀಡಿ, ವಿದ್ಯಾರ್ಥಿಗಳು ತಯಾರಿಸಿದ ಮಾದರಿಗಳನ್ನು ಪರಿಶೀಲಿಸಿದರು ಮತ್ತು ವಿದ್ಯಾರ್ಥಿಗಳು ನೀಡುತ್ತಿದ್ದ ವಿವರಣೆಯನ್ನು ಸಮಾಧಾನದಿಂದ ಕೇಳುತ್ತ ಮಕ್ಕಳನ್ನು ಶ್ಲಾಘಿಸಿದರು. ಕಾರ್ಯಕ್ರಮಕ್ಕೆ ಪೋಷಕರನ್ನು ಆಹ್ವಾನಿಸಲಾಗಿತ್ತು. ಎಲ್ಲಾ ಪೋಷಕರು ಶಾಲೆಗೆ ಆಗಮಿಸಿ ಮಕ್ಕಳ ಪ್ರತಿಭೆಗೆ, ಸೃಜನಶೀಲತೆಗೆ ಸಾಕ್ಷಿಯಾದರು.

Scroll to Top