Bengaluru, Sept 26: Students of Gokulam celebrated Fruits Day herein Rashtrotthana Vidya Kendra – Banashankari.Children were introduced to fruits through songs and dances in the school auditorium. Children carved fruits and talked about it. In the quiz program conducted by the Pradhanacharya about fruits, the children responded well.Different types of real fruits and ice cream made by teachers were displayed in the A.V. room. Children got more information about fruits and bought fruits. A game and stage show were organized for the children in the school quadrangle. The fruits bought by the children were cut and made into a salad in the classroom. The children sat together and ate it.
ಬೆಂಗಳೂರು, ಸಪ್ಟೆಂಬರ್ 26: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಗೋಕುಲಂ ವಿದ್ಯಾರ್ಥಿಗಳು ಹಣ್ಣುಗಳ ದಿನವನ್ನು ಆಚರಿಸಿದರು.ಶಾಲಾ ಆಡಿಟೋರಿಯಂನಲ್ಲಿ ಹಾಡು ಹಾಗೂ ನೃತ್ಯಗಳ ಮೂಲಕ ಹಣ್ಣುಗಳ ಪರಿಚಯವನ್ನು ಮಕ್ಕಳಿಗೆ ಮಾಡಿಕೊಡಲಾಯಿತು. ಹಣ್ಣುಗಳನ್ನು ಕೆತ್ತನೆ ಮಡಿ ಮಕ್ಕಳು ಅದರ ಬಗ್ಗೆ ಮಾತನಾಡಿದರು. ಪ್ರಧಾನಾಚಾರ್ಯರು ಹಣ್ಣುಗಳ ಬಗ್ಗೆ ಮಕ್ಕಳಿಗೆ ನಡೆಸಿದ ಕ್ವಿಝ್ ಕಾರ್ಯಕ್ರಮದಲ್ಲಿ ಮಕ್ಕಳು ಚೆನ್ನಾಗಿ ಉತ್ತರಿಸಿದರು. ಎ.ವಿ. ಕೊಠಡಿಯಲ್ಲಿ ಬೇರೆಬೇರೆ ತರಹದ ನಿಜವಾದ ಹಣ್ಣುಗಳನ್ನು ಹಾಗೂ ಶಿಕ್ಷಕರೆ ಮಾಡಿದ ಐಸಕ್ರೀಂ ಅನ್ನು ಪ್ರದರ್ಶನ ಮಾಡಲಾಗಿತ್ತು. ಹಣ್ಣುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮಕ್ಕಳು ಪಡೆದರು ಹಾಗೂ ಹಣ್ಣುಗಳನ್ನು ಕೊಂಡರು. ಶಾಲೆಯ ಚೌಕಾಂಗಣದಲ್ಲಿ ಮಕ್ಕಳಿಗೆ ಆಟವನ್ನು ಮತ್ತು ಸ್ಟೇಜ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮಕ್ಕಳು ಕೊಂಡುಕೊಂಡ ಹಣ್ಣುಗಳನ್ನು ಶಾಲಾತರಗತಿಯಲ್ಲಿ ಕತ್ತರಿಸಿ ಸಲಾಡ್ ಮಾಡಲಾಯಿತು. ಮಕ್ಕಳು ಒಟ್ಟಿಗೆ ಕುಳಿತು ಅದನ್ನು ಸೇವಿಸಿದರು.