Bengaluru, October 3: Devi Puja and Lalita Sahasranama Parayana was performed on the beginning of Navratri by Matru Bharati herein Rashtrotthana Vidya Kendra – Banashankari. Pradhanacharya started the program by lighting the lamp. Smt. Shweta sang the prayer. Sri Anil Kumar offered pooja to the goddess. Under the leadership of Smt. Vedavati, the group recited Lalitha Sahasranama and performed kumkumarchane. Secretary of Matru Bharati Dr. Soumya explained the significance of Lalita Sahasranama. Later Kannika Puja was performed and Mahamangalarathi was performed. Many mothers sang Devaranama. As per Navaratri tradition, the dolls were symbolically assembled. A total of 27 mothers participated.
ಬೆಂಗಳೂರು, ಅಕ್ಟೋಬರ್ 3: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ಬನಶಂಕರಿಯಲ್ಲಿ ಮಾತೃಭಾರತೀ ವತಿಯಿಂದ ನವರಾತ್ರಿಯ ಆರಂಭದ ದಿನ ದೇವಿ ಪೂಜೆ ಮತ್ತು ಲಲಿತಾ ಸಹಸ್ರನಾಮ ಪಾರಾಯಣವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಧಾನಾಚಾರ್ಯರು ದೀಪ ಬೆಳಗಿ ಕಾರ್ಯಕ್ರಮವನ್ನು ಆರಂಭಿಸಿದರು. ಶ್ರೀಮತಿ ಶ್ವೇತಾ ಅವರು ಪ್ರಾರ್ಥನೆ ಹಾಡಿದರು. ಶ್ರೀ ಅನಿಲ್ ಕುಮಾರ್ ಅವರು ದೇವಿಗೆ ಪೂಜೆ ಸಲ್ಲಿಸಿದರು. ಶ್ರೀಮತಿ ವೇದಾವತಿ ಅವರ ನೇತೃತ್ವದಲ್ಲಿ ಸಾಮೂಹಿಕ ಲಲಿತ ಸಹಸ್ರನಾಮ ಪಾರಾಯಣ ಮಾಡಿ ಕುಂಕುಮಾರ್ಚನೆಯನ್ನು ನೆರವೇರಿಸಿದರು. ಮಾತೃಭಾರತಿಯ ಕಾರ್ಯದರ್ಶಿ ಡಾ. ಸೌಮ್ಯ ಅವರು ಲಲಿತಾ ಸಹಸ್ರನಾಮದ ಮಹತ್ತ್ವವನ್ನು ತಿಳಿಸಿದರು. ಬಳಿಕ ಕನ್ನಿಕಾ ಪೂಜೆ ಮಾಡಿ ಮಹಾಮಂಗಳಾರತಿಯನ್ನು ನೆರವೇರಿಸಲಾಯಿತು. ಅನೇಕ ಮಾತೆಯರು ದೇವರನಾಮವನ್ನು ಹಾಡಿದರು. ನವರಾತ್ರಿಯ ಸಂಪ್ರದಾಯದಂತೆ ಸಾಂಕೇತಿಕವಾಗಿ ಗೊಂಬೆಗಳನ್ನು ಕೂಡಿಸಲಾಗಿತ್ತು. ಒಟ್ಟು 27 ಮಾತೆಯರು ಭಾಗವಹಿಸಿದ್ದರು.