Bengaluru, Oct 18: Toy Day was celebrated herein Rashtrotthana Vidya Kendra – Banashankari. In the activity hall, toys bought by the children, bunny tree, Maa Saraswati, Ayudha Puja paraphernalia were displayed. Children bought dandiya sticks and danced with teachers in the hall. They got to know about Dussehra festival and was happy to see the display of dolls. Children offered flowers to Mother Durga and took her blessings.
ಬೆಂಗಳೂರು, ಅಕ್ಟೋಬರ್ 18: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಆಟಿಕೆ ದಿನವನ್ನು ಆಚರಿಸಲಾಯಿತು. ಚಟುವಟಿಕೆ ಸಭಾಂಗಣದಲ್ಲಿ ಮಕ್ಕಳು ಖರೀದಿಸಿದ ಆಟಿಕೆಗಳು, ಬನ್ನಿ ಮರ, ಮಾ ಸರಸ್ವತಿ, ಆಯುಧ ಪೂಜಾ ಸಾಮಗ್ರಿಗಳನ್ನು ಪ್ರದರ್ಶಿಸಲಾಗಿತ್ತು. ತೋಟಗಾರಿಕೆಗೆ ಸಂಬಂಧಿಸಿದ ಸಲಕರಣೆಗಳು, ಬಿಸೋಕಲ್ಲು, ಒರಳುಕಲ್ಲು, ಚಾಕು, ಕತ್ತರಿ ಇತ್ಯಾದಿ ವಸ್ತುಗಳನ್ನು ಇಟ್ಟು ಆಯುಧ ಪೂಜೆ ಮಾಡುವ ವಿಧಾನವನ್ನು ತೋರಿಸಲಾಗಿತ್ತು. ಮತ್ತೊಂದು ಕಡೆ, ಸರಸ್ವತಿ ಪೂಜೆ ಮಾಡಿ ಅಲ್ಲಿ ನಮ್ಮ ಶಾಲೆಯಲ್ಲಿ ಉಪಯೋಗಿಸುವ ಎಲ್ಲಾ ಸಂಗೀತ ವಾದ್ಯಗಳನಿಟ್ಟು ಮಕ್ಕಳಿಂದ ಹೂಗಳನ್ನು ಸಮರ್ಪಿಸಲಾಯಿತು. ಒಂದೆಡೆ ನವದುರ್ಗೆಯರ ಚಿತ್ರವನ್ನು ಬಿಂಬಿಸಿದರೆ ಮತ್ತೊಂದೆಡೆ ರಾವಣನ ಚಿತ್ರಗಳನ್ನು ತೋರಿಸಲಾಗಿತ್ತು. ಮಕ್ಕಳು ಕೋಲಾಟದ ಕೋಲುಗಳನ್ನು ಖರೀದಿಸಿ ಸಭಾಂಗಣದಲ್ಲಿ ಶಿಕ್ಷಕರೊಂದಿಗೆ ನೃತ್ಯ ಮಾಡಿದರು. ದಸರಾ ಹಬ್ಬದ ಬಗ್ಗೆ ತಿಳಿದುಕೊಂಡು ಗೊಂಬೆಗಳ ಪ್ರದರ್ಶನ ಕಂಡು ಸಂತಸಪಟ್ಟರು. ದುರ್ಗಾ ಮಾತೆಗೆ ಪುಷ್ಪಾರ್ಚನೆ ಮಾಡಿ ಆಶೀರ್ವಾದ ಪಡೆದರು.