Bengaluru, Apr. 10: Senior writer, scholar, immediate past president of Rashtrotthana Parishat and honorary editor of Rashtrotthana Sahitya, Nadoja Dr. S. R. Ramaswamy, who completed his earthly journey, paid tribute to the great man who lived a full life and rendered immense service to the field of literature. The Principal, Vice Principal and teaching staff of Rashtrotthana Vidya Kendra – Banashankari observed a minute of silence and paid tribute to him. Speaking on the occasion, Smt. Girija, Head of the Kannada Department, spoke in detail about the significant contributions made by Dr. S. R. Ramaswamy to literature and society.

ಬೆಂಗಳೂರು, ಏ. 10: ಹಿರಿಯ ಸಾಹಿತಿ, ವಿದ್ವಾಂಸರು, ರಾಷ್ಟ್ರೋತ್ಥಾನ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷರು ಹಾಗೂ ರಾಷ್ಟ್ರೋತ್ಥಾನ ಸಾಹಿತ್ಯದ ಗೌರವ ಸಂಪಾದಕರಾಗಿದ್ದ ನಾಡೋಜ ಡಾ. ಎಸ್. ಆರ್. ರಾಮಸ್ವಾಮಿ ಅವರು ತಮ್ಮ ಇಹಲೋಕದ ಯಾತ್ರೆಯನ್ನು ಮುಗಿಸಿದ್ದು ತುಂಬು ಜೀವನ ನಡೆಸಿ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿದ ಮಹನೀಯರಿಗೆ ಚಿರಶಾಂತಿ ಲಭಿಸಲಿ ಎಂದು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯ ಪ್ರಧಾನಾಚಾರ್ಯರು, ಉಪ ಪ್ರಧಾನಾಚಾರ್ಯರು ಮತ್ತು ಶಿಕ್ಷಕ ವೃಂದವು ಸೇರಿ ಒಂದು ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಗಿರಿಜಾ ಅವರು ಡಾ. ಎಸ್. ಆರ್. ರಾಮಸ್ವಾಮಿ ಅವರು ಸಾಹಿತ್ಯ ಮತ್ತು ಸಮಾಜಕ್ಕೆ ಸಲ್ಲಿಸಿದ ಮಹತ್ವದ ಕೊಡುಗೆಗಳ ಬಗ್ಗೆ ವಿವರವಾಗಿ ತಿಳಿಸಿದರು.