“Sir Mokshagundam Visvesvaraya who was popularly known as Sir M.V. one of the eminent inventors of India. Considering his contribution to the society, he has received the highest award like ‘Bharat Ratna’. Also, the British government honoured him with the title of ‘Sir’. His birthday is celebrated as ‘Engineer’s Day’ across India” – Students, Rashtrotthana Vidya Kendra – Banashankari.Bengaluru, Sept 16: Engineer’s Day was celebrated herein Rashtrotthana Vidya Kendra – Banashankari as part of Sir M. Visvesvaraya’s birth anniversary.School Principal offered floral tributes to Sir M.V.’s portrait.Then the students talked about the importance of this day.
“ಸರ್ ಎಂ.ವಿ. ಎಂದು ಜನಪ್ರಿಯರಾಗಿದ್ದ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯರವರು ಭಾರತದ ಗಣ್ಯ ಅಭಿಯಂತರರಲ್ಲಿ ಒಬ್ಬರು. ಇವರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಇವರಿಗೆ ‘ಭಾರತ ರತ್ನ’ದಂತಹ ಅತ್ಯುನ್ನತ ಪ್ರಶಸ್ತಿಯು ಲಭ್ಯವಾಗಿದೆ. ಹಾಗೆಯೇ ಬ್ರಿಟಿಷ್ ಸರ್ಕಾರವು ‘ಸರ್’ ಎಂಬ ಪದವಿಯನ್ನು ನೀಡಿ ಗೌರವಿಸಿದೆ. ಇವರು ಹುಟ್ಟಿದ ದಿನವನ್ನು ಭಾರತ ದೇಶದಾದ್ಯಂತ ‘ಅಭಿಯಂತರರ ದಿನ’ ಎಂದು ಆಚರಿಸುತ್ತಾರೆ. – ವಿದ್ಯಾರ್ಥಿಗಳು, ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿ. ಬೆಂಗಳೂರು, ಸಪ್ಟೆಂಬರ್ 16: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ಬನಶಂಕರಿಯಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಅವರ ಜಯಂತಿಯ ಅಂಗವಾಗಿ ಅಭಿಯಂತರರ ದಿನವನ್ನು ಆಚರಿಸಲಾಯಿತು. ಶಾಲಾ ಪ್ರಮುಖರು ಸರ್ ಎಂ.ವಿ. ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಸಲ್ಲಿಸಿದರು. ನಂತರ ವಿದ್ಯಾರ್ಥಿಗಳು ಈ ದಿನದ ಮಹತ್ತ್ವವನ್ನು ತಿಳಿಸಿದರು.