Bengaluru, Sept. 25: The ‘Gokulam’ Sports Meet was organised at Rashtrotthana Vidya Kendra – Banashankari.
- Ku. Manushree, an alumna of the school, inaugurated the sports meet.
- The lighting of the lamp, flag hoisting, flag salutation, and a charming march-past by the little children added lustre to the event.
- The sports torch was lit, and the program proceeded with a Ganesha invocation by UKG students.
- A beautiful display featuring floral motifs captured everyone’s attention.
- Various sports competitions were organised for Pre-KG, LKG, and UKG children, including running races, hoop-loop, ball-in-the-cone, bird-to-nest, hula hoop, and duck-and-the-pond.
- Special sports competitions were also organised for teachers and parents.
- All children from Pre-KG and ‘Matru Chhaya’ were honored with trophies and certificates.
- Children from LKG and UKG classes secured first, second, and third places and received prizes.
Special Event
- Pandit Deendayal Upadhyaya’s birth anniversary was also celebrated on this occasion.
- Former CRPF soldier Sri C. K. Ramesh graced the program.
- Marking the 150th anniversary of the song ‘Vande Mataram’, Correspondent Sri Vasantha kumar delivered the keynote address, sharing his thoughts on the song’s historical significance, the spirit of patriotism, and the respect everyone should hold for the country.
- On this occasion, school children, teachers, and parents enthusiastically participated and contributed to the attempt to set a Guinness World Record through the mass singing of ‘Vande Mataram’.
ಬೆಂಗಳೂರು, ಸೆ. 25: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಗೋಕುಲಂ ಕ್ರೀಡೋತ್ಸವವನ್ನು ಆಯೋಜಿಸಲಾಗಿತ್ತು.
- ಶಾಲೆಯ ಹಳೆಯ ವಿದ್ಯಾರ್ಥಿನಿಯಾದ ಕುಮಾರಿ ಮನುಶ್ರೀ ಅವರು ಕ್ರೀಡೋತ್ಸವವನ್ನು ಉದ್ಘಾಟಿಸಿದರು.
- ದೀಪಪ್ರಜ್ವಲನ, ಧ್ವಜಾರೋಹಣ, ಧ್ವಜಪ್ರಣಾಮ ಮತ್ತು ಪುಟಾಣಿ ಮಕ್ಕಳ ಆಕರ್ಷಕ ಮಾರ್ಚ್ ಪಾಸ್ಟ್ ಕಾರ್ಯಕ್ರಮಕ್ಕೆ ಮೆರುಗು ನೀಡಿದವು.
- ಕ್ರೀಡಾಜ್ಯೋತಿ ಬೆಳಗಿಸಲಾಯಿತು ಹಾಗೂ ಯುಕೆಜಿ ಮಕ್ಕಳ ಗಣೇಶ ಸ್ತುತಿಯೊಂದಿಗೆ ಕಾರ್ಯಕ್ರಮ ಮುಂದುವರಿಯಿತು.
- ಹೂವುಗಳ ಚಿತ್ರಗಳನ್ನು ಹಿಡಿದು ನೀಡಿದ ಸುಂದರ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.
- ಪ್ರಿ-ಕೆಜಿ, ಎಲ್ಕೆಜಿ ಮತ್ತು ಯುಕೆಜಿ ಮಕ್ಕಳಿಗೆ ಓಟ, ಹೂಪ್ ಲೂಪ್, ಬಾಲ್ ಇನ್ ದಿ ಕೋನ್, ಬರ್ಡ್ ಟು ನೆಸ್ಟ್, ಹುಲಾ ಹೂಪ್, ಡಕ್ ಅಂಡ್ ದಿ ಪಾಂಡ್ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಯಿತು.
- ಶಿಕ್ಷಕಿಯರು ಹಾಗೂ ಪೋಷಕರಿಗೂ ವಿಶೇಷ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
- ಪ್ರೀ-ಕೆಜಿ (Pre-KG) ಮತ್ತು ‘ಮಾತೃ ಛಾಯಾ’ದ ಎಲ್ಲಾ ಮಕ್ಕಳಿಗೆ ಟ್ರೋಫಿ ಹಾಗೂ ಪ್ರಮಾಣಪತ್ರಗಳನ್ನು ನೀಡಿ ಗೌರವಿಸಲಾಯಿತು.
- ಎಲ್ಕೆಜಿ (LKG) ಮತ್ತು ಯುಕೆಜಿ (UKG) ತರಗತಿಗಳ ಮಕ್ಕಳು ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಪಡೆದು ಬಹುಮಾನಗಳನ್ನು ಸ್ವೀಕರಿಸಿದರು.
ವಿಶೇಷ ಕಾರ್ಯಕ್ರಮ
- ಇದೇ ಸಂದರ್ಭದಲ್ಲಿ ಪಂಡಿತ್ ದೀನದಯಾಳ್ ಉಪಾಧ್ಯಾಯರ ಜಯಂತಿಯನ್ನು ಆಚರಿಸಲಾಯಿತು.
- ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾಜಿ ಸಿಆರ್ಪಿಎಫ್ ಯೋಧರಾದ ಶ್ರೀ ಸಿ. ಕೆ. ರಮೇಶ್ ಅವರು ಆಗಮಿಸಿದ್ದರು.
- ಕಾರ್ಯಕ್ರಮದಲ್ಲಿ ‘ವಂದೇ ಮಾತರಂ’ ಗೀತೆಯ 150ನೇ ವರ್ಷಾಚರಣೆಯ ಅಂಗವಾಗಿ ಕರೆಸ್ಪಾಂಡೆಂಟ್ ಶ್ರೀ ವಸಂತಕುಮಾರ ಅವರು ಮುಖ್ಯ ಭಾಷಣವನ್ನು ನೀಡಿ, ವಂದೇ ಮಾತರಂನ ಐತಿಹಾಸಿಕ ಮಹತ್ವ, ರಾಷ್ಟ್ರಭಾವನೆ ಹಾಗೂ ದೇಶದ ಬಗ್ಗೆ ಪ್ರತಿಯೊಬ್ಬರಲ್ಲೂ ಇರಬೇಕಾದ ಗೌರವದ ಕುರಿತು ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡರು.
- ಇದೇ ಸಂದರ್ಭದಲ್ಲಿ ‘ವಂದೇ ಮಾತರಂ’ ಗೀತೆಯ ಸಾಮೂಹಿಕ ಗಾಯನದ ಮೂಲಕ ಗಿನ್ನೆಸ್ ವಿಶ್ವದಾಖಲೆ ನಿರ್ಮಿಸುವ ಪ್ರಯತ್ನಕ್ಕೆ ಶಾಲೆಯ ಮಕ್ಕಳು, ಶಿಕ್ಷಕರು ಹಾಗೂ ಪೋಷಕರು ಉತ್ಸಾಹದಿಂದ ಭಾಗವಹಿಸಿ ತಮ್ಮ ಕೊಡುಗೆ ನೀಡಿದರು.






