Gurupurnima in RVK – Banashankari

Kimatra Bahanoktena Shastrakoti Shatairapi |
Durlabha Chittavishrantirvina Gurukripam Param ||
Bengaluru, July 20: Gurupurnima was celebrated herein Rashtrotthana Vidya Kendra – Banashankari. The program was started by paying floral tributes to Guru Vyasa Maharshi.Students spoke about the significance of Gurupurnima by performing puja to Maharishi Vedavyasa. Students of primary and secondary classes performed group songs, group dances and plays.Reciting a hundred million scriptures serves a purpose in instilling discipline and knowledge, but without grace, the mind will not find peace. This implies that manolaya, the state of mental absorption, will remain unattainable.

Hindus traditionally celebrate the full moon of the Ashada month of the Hindu calendar as Guru Poornima. Vedavyasa Maharshi, one of the greatest gurus of the Hindu tradition, was not only born on this day, but also started the composition of the Brahmasutras with the beginning of the Ashad Shukla Paksha. On this day that Shukla Paksha ends. To commemorate this, Brahma Sutras are recited on this day and this day is also known as Vyasa Purnima. In all the spiritual traditions of Hinduism, this festival is celebrated with great devotion to pay gratitude to their gurus.

ಕಿಮತ್ರ ಬಹುನೋಕ್ತೇನ ಶಾಸ್ತ್ರಕೋಟಿ ಶತೈರಪಿ |
ದುರ್ಲಭಾ ಚಿತ್ತವಿಶ್ರಾಂತಿರ್ವಿನಾ ಗುರುಕೃಪಾಂ ಪರಾಮ್ ||
ಬೆಂಗಳೂರು, ಜುಲೈ 20: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಗುರುಪೂರ್ಣಿಮೆಯನ್ನು ಆಚರಿಸಲಾಯಿತು. ಪ್ರಧಾನಾಚಾರ್ಯರು ಹಾಗೂ ಪ್ರಮುಖರು ಗುರು ವ್ಯಾಸ ಮಹರ್ಷಿಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮಹರ್ಷಿ ವೇದವ್ಯಾಸರನ್ನು ಗೌರವಿಸುವ ಮೂಲಕ ವಿದ್ಯಾರ್ಥಿಗಳು ಗುರುಪೂರ್ಣಿಮೆ ಮಹತ್ತ್ವದ ಕುರಿತು ಮಾತನಾಡಿದರು. ಪ್ರಾಥಮಿಕ ಹಾಗೂ ಮಾಧ‍್ಯಮಿಕ ತರಗತಿಯ ವಿದ್ಯಾರ್ಥಿಗಳು ಸಮೂಹ ಗೀತೆ, ಸಮೂಹ ನೃತ್ಯ ಹಾಗೂ ನಾಟಕಗಳನ್ನು ಪ್ರದರ್ಶಿಸಿದರು. ನೂರುಕೋಟಿ ಶಾಸ್ತ್ರಗಳನ್ನು ಹೇಳಿದರೂ ಏನು ಪ್ರಯೋಜನ? ಗುರುಕೃಪೆಯಿಲ್ಲದೇ ಮನಸ್ಸಿಗೆ ವಿಶ್ರಾಂತಿಯು ಲಭಿಸುವುದಿಲ್ಲ. ಅಂದರೆ ಮನೋಲಯವು ಆಗುವುದಿಲ್ಲ.

ಹಿಂದೂ ಪಂಚಾಂಗದ ಆಷಾಢ ಮಾಸದ ಹುಣ್ಣಿಮೆಯನ್ನು ಹಿಂದೂಗಳು ಸಾಂಪ್ರದಾಯಿಕವಾಗಿ ಗುರು ಪೂರ್ಣಿಮೆ ಎಂದು ಆಚರಿಸುತ್ತಾರೆ. ಹಿಂದೂ ಪರಂಪರೆಯ ಶ್ರೇಷ್ಠ ಗುರುಗಳಲ್ಲಿ ಒಬ್ಬರಾದ ವೇದವ್ಯಾಸ ಮಹರ್ಷಿಗಳು ಈ ದಿನ ಹುಟ್ಟಿದ್ದಲ್ಲದೇ, ಆಷಾಢ ಶುಕ್ಲ ಪಕ್ಷದ ಪ್ರಾರಂಭದಿಂದ ಬ್ರಹ್ಮಸೂತ್ರಗಳ ರಚನೆ ಪ್ರಾರಂಭಿಸಿದರು. ಈ ದಿನ ಆ ಶುಕ್ಲ ಪಕ್ಷ ಕೊನೆಗೊಳ್ಳುತ್ತದೆ. ಇದರ ಸ್ಮರಣಾರ್ಥಕವಾಗಿ ಈ ದಿನದಂದು ಬ್ರಹ್ಮಸೂತ್ರಗಳ ಪಠಣ ಮಾಡಲಾಗುತ್ತದೆ ಹಾಗೂ ಈ ದಿನವನ್ನು ವ್ಯಾಸ ಪೂರ್ಣಿಮಾ ಎಂದೂ ಕರೆಯುತ್ತಾರೆ. ಹಿಂದೂ ಧರ್ಮದ ಎಲ್ಲ ಅಧ್ಯಾತ್ಮಿಕ ಪರಂಪರೆಗಳಲ್ಲಿಯೂ ತಮ್ಮ ಗುರುಗಳಿಗೆ ಕೃತಜ್ಞತೆ ಸಲ್ಲಿಸುತ್ತ ಈ ಹಬ್ಬವನ್ನು ಅತ್ಯಂತ ಶ್ರದ್ಧೆ ಭಕ್ತಿಯಿಂದ ಆಚರಿಸಲಾಗುತ್ತದೆ.

Scroll to Top