Bengaluru, Feb 21 : International Mother Tongue Day was celebrated herein Rashtrotthana Vidya Kendra – Banashankari.
ಬೆಂಗಳೂರು, ಫೆಬ್ರವರಿ 21 : ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ಬನಶಂಕರಿಯಲ್ಲಿ ಅಂತಾರಾಷ್ಟ್ರೀಯ ಮಾತೃಭಾಷಾ ದಿವಸವನ್ನು ಆಚರಿಸಲಾಯಿತು.
ಶಾಲಾ ಪ್ರಾರ್ಥನೆಯ ನಂತರ ವಿವಿಧ ಪ್ರಾರ್ಥನಾ ಸಭೆಗಳಲ್ಲಿ ಮಕ್ಕಳು ಸಂಸ್ಕೃತ, ಕನ್ನಡ ಮತ್ತು ಹಿಂದಿ ಈ ಮೂರು ಭಾಷೆಗಳಿಗೆ ಸಂಬಂಧಿಸಿದಂತೆ ಮಾತೃಭಾಷೆ ಕುರಿತು ಮಾತನಾಡಿದರು. ಮಾತೃಭಾಷೆ ನಮ್ಮ ಸಂಸ್ಕೃತಿಯ ಪ್ರತೀಕ. ಬಾಲ್ಯದಲ್ಲಿ ಭಾಷೆಯು ಮಗುವಿನ ವ್ಯಕ್ತಿತ್ವ, ಸಾಮರ್ಥ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳು ಮಾತೃಭಾಷೆಯಲ್ಲಿ ಕಲಿತಾಗ ಆತ್ಮವಿಶ್ವಾಸದಿಂದ ಕಲಿಯುತ್ತಾರೆ. ಪ್ರತಿಯೊಬ್ಬರಿಗೂ ತಮ್ಮ ಮಾತೃಭಾಷೆ ಕೇಳಿದರೆ ಅಭಿಮಾನ ಉಂಟಾಗುತ್ತದೆ. ಆದರೆ ಈ ಅಭಿಮಾನವನ್ನು ತಂತ್ರಜ್ಞಾನ ಮತ್ತು ಇತರ ಭಾಷೆಗಳು ಮರೆಮಾಚಿದ್ದು ಜನ ತಮ್ಮ ಮಾತೃಭಾಷೆಯನ್ನು ಮರೆಯುತ್ತಿದ್ದಾರೆ. ಇದಕ್ಕಾಗಿ ಫೆಬ್ರವರಿ 21 ವಿಶ್ವದಾದ್ಯಂತ ಮಾತೃಭಾಷಾ ದಿನವನ್ನು ಆಚರಿಸಲಾಗುತ್ತದೆ. ಪ್ರಥಮ ಬಾರಿಗೆ 1999ರಲ್ಲಿ ಈ ದಿನಾಚರಣೆಯನ್ನು ಅಂಗೀಕರಿಸಿ, ಘೋಷಿಸಲಾಯಿತು.