Kalotsava in RVK – Banashankari

“Art should be worshipped. It is possible to achieve more through this” actor and director, Sri Suchendraprasad, said this while inaugurating the Kala Utsava of Rashtrotthana Vidya Kendra – Banashankari.
Bengaluru, Sept 3 & 4: Kalotsava was organized herein Rashtrotthana Vidya Kendra – Banashankari.An actor and director, Sri Suchendra Prasad graced the opening ceremony of this festival which was organized for two days related to visual arts and performing arts.Including accommodation, the festival helped bring out many ideas related to art under one roof.122 students from 11 national schools in different regions participated in this festival. The festival held sessions related to many themes like music, dance, tabala, painting, drama etc. The festival helped the students to gain more expertise in their field of interest.

“ಕಲೆಯನ್ನು ಆರಾಧಿಸಬೇಕು. ಈ ಮೂಲಕ ಹೆಚ್ಚಿನ ಸಾಧನೆ ಮಾಡಲು ಸಾಧ್ಯ” ಎನ್ನುವ ಮಾತನ್ನು ನಟ, ನಿರ್ದೇಶಕರಾದ ಶ್ರೀ ಸುಚೆಂದ್ರಪ್ರಸಾದ್ ಅವರು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯ ಕಲೋತ್ಸವವನ್ನು ಉದ್ಘಾಟಿಸಿ ಹೇಳಿದರು.
ಬೆಂಗಳೂರು, ಸಪ್ಟೆಂಬರ್ 3 & 4: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಕಲೋತ್ಸವವನ್ನು ಆಯೋಜಿಸಲಾಗಿತ್ತು.ದೃಶ್ಯ ಕಲೆಗಳು ಮತ್ತು ಪ್ರದರ್ಶನ ಕಲೆಗಳಿಗೆ ಸಂಬಂಧಿಸಿದಂತೆ ಎರಡು ದಿನಗಳ ಕಾಲ ಆಯೋಜಿಸಲಾಗಿದ್ದ ಈ ಉತ್ಸವದ ಉದ್ಘಾಟನಾ ಸಮಾರಂಭಕ್ಕೆ ನಟ, ನಿರ್ದೇಶಕರಾಗಿರುವ ಶ್ರೀ ಸುಚೇಂದ್ರ ಪ್ರಸಾದ್ ಅವರು ಆಗಮಿಸಿದ್ದರು. ವಸತಿಯನ್ನು ಒಳಗೊಂಡಂತೆ ಆಯೋಜಿಸಲಾಗಿದ್ದ ಈ ಉತ್ಸವವು ಕಲೆಗೆ ಸಂಬಂಧಿಸಿದ ಅನೇಕ ವಿಚಾರಗಳನ್ನು ಒಂದೇ ಸೂರಿನಡಿ ಹೊರಹೊಮ್ಮಿಸಲು ಸಹಕಾರಿಯಾಯಿತು. ವಿವಿಧ ಪ್ರದೇಶಗಳಲ್ಲಿರುವ ಸುಮಾರು 11 ರಾಷ್ಟ್ರೋತ್ಥಾನ ಶಾಲೆಗಳ 122 ವಿದ್ಯಾರ್ಥಿಗಳು ಈ ಉತ್ಸವದಲ್ಲಿ ಭಾಗವಹಿಸಿದ್ದರು. ಉತ್ಸವದಲ್ಲಿ ಸಂಗೀತ, ನೃತ್ಯ, ತಬಲ, ಚಿತ್ರಕಲೆ, ನಾಟಕ ಮುಂತಾದ ಅನೇಕ ವಿಚಾರಗಳಿಗೆ ಸಂಬಂಧಿಸಿದ ಅವಧಿಗಳನ್ನು ನಡೆಸಲಾಯಿತು. ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಹೆಚ್ಚಿನ ಪರಿಣತಿಯನ್ನು ಸಾಧಿಸುವಲ್ಲಿ ಈ ಕಲೋತ್ಸವವು ಸಹಕಾರಿಯಾಯಿತು.

Scroll to Top