Bengaluru, Sept. 25: A mass singing event for the ‘Vande Mataram’ song was organised at Rashtrotthana Vidya Kendra – Banashankari.
- C.K. Ramesh, a former CRPF personnel, attended the event as the Chief Guest.
- The Chief Guest offered floral tributes to Bharat Mata.
- Teachers explained the significance of the ‘Vande Mataram’ song.
- Subsequently, the flag was hoisted, and the National Anthem was sung.
- Addressing the gathering, the Chief Guest emphasized the need to instil patriotism in children and encouraged them to be ready to serve the country. He spoke about the importance of being aware of the nation and highlighted the strength and dedication of soldiers. He also expressed his appreciation for the school.
- A Guinness World Record was set by singing ‘Vande Mataram’ collectively at exactly 11:00 AM.
- A total of 3,993 people participated in the event, including students (from Pre-KG to PUC), teachers, parents, vehicle drivers, and support staff.
ಬೆಂಗಳೂರು, ಸೆ. 25: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ 150ನೇ ವಂದೇ ಮಾತರಂ ಗೀತೆಯ ಸಾಮೂಹಿಕ ಗಾಯನ ಕಾರ್ಯಕ್ರಮವನ್ನು ಶಾಲಾ ಆವರಣದಲ್ಲಿ ಏರ್ಪಡಿಸಲಾಯಿತು.
- ಮುಖ್ಯ ಅತಿಥಿಗಳಾಗಿ CRPF ನಲ್ಲಿ ಕಾರ್ಯನಿರ್ವಹಿಸಿದ್ದ ಸಿ.ಕೆ. ರಮೇಶ್ ಆಗಮಿಸಿದ್ದರು.
- ಮುಖ್ಯ ಅತಿಥಿಗಳು ಭಾರತಮಾತೆಗೆ ಪುಷ್ಪಾಂಜನೆಯನ್ನು ಮಾಡಿದರು.
- ಶಿಕ್ಷಕರು ವಂದೇ ಮಾತರಂ ಗೀತೆಯ ಮಹತ್ವವನ್ನು ತಿಳಿಸಿಕೊಟ್ಟರು.
- ನಂತರ ಧ್ವಜಾರೋಹಣವನ್ನು ಮಾಡಿ ರಾಷ್ಟ್ರಗೀತೆಯನ್ನು ಹಾಡಲಾಯಿತು.
- ಮುಖ್ಯ ಅತಿಥಿಗಳು ಎಲ್ಲರನ್ನು ಉದ್ದೇಶಿಸಿ ಮಾತನಾಡುತ್ತಾ, ಮಕ್ಕಳಲ್ಲಿ ದೇಶಭಕ್ತಿಯನ್ನು ಮೂಡಿಸಬೇಕು, ದೇಶಕ್ಕಾಗಿ ಏನಾದರು ಮಾಡಲು ಸಿದ್ದರಿರಬೇಕು ಎಂದು ತಿಳಿಸಿದರು. ದೇಶದ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು. ಸೈನಿಕರ ಬಗ್ಗೆ, ಸೈನಿಕರ ಶಕ್ತಿ ಹಾಗೂ ಅವರ ಪರಿಶ್ರಮದ ಬಗ್ಗೆ ತಿಳಿಸಿದರು. ಶಾಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
- 11 ಗಂಟೆಗೆ ಸರಿಯಾಗಿ ವಂದೇ ಮಾತರಂ ಗೀತೆಯನ್ನು ಸಾಮೂಹಿಕವಾಗಿ ಹಾಡುವುದರ ಮೂಲಕ ಗಿನ್ನಿಸ್ ದಾಖಲೆಯನ್ನು ನಿರ್ಮಿಸಲಾಯಿತು.
- ಕಾರ್ಯಕ್ರಮದಲ್ಲಿ ಪ್ರಿ-ಕೆಜಿಯಿಂದ ಪಿಯುಸಿಯವರೆಗೆ ಎಲ್ಲ ಮಕ್ಕಳು, ಶಿಕ್ಷಕರು, ಪೋಷಕರು ಹಾಗೂ ವಾಹನ ಚಾಲಕರು, ಸಹಾಯಕರು ಸೇರಿ ಒಟ್ಟು 3993 ಮಂದಿ ಪಾಲ್ಗೊಂಡಿದ್ದರು.






