Bengaluru, August 9: Nagara Panchami was celebrated with devotion herein Rashtrotthana Vidya Kendra – Banashankari. The children explained the importance of Nagara Panchami celebration. Nagar Panchami is a festival celebrated by Hindus in many parts of India. It is celebrated on the Panchami of Shuklapaksha in the month of Shravan. On this day, Goddess Naga is worshipped. Students gave information that this festival is believed to be a festival where both brother and sister are worshiped together. The children entertained the audience with citations of mythological stories about Nagara Panchami, melodious group singing, and beautiful dance.
ಬೆಂಗಳೂರು, ಆಗಸ್ಟ್ 9: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಶ್ರದ್ಧಾಭಕ್ತಿಯಿಂದ ನಾಗರಪಂಚಮಿಯನ್ನು ಆಚರಿಸಲಾಯಿತು. ನಾಗರ ಪಂಚಮಿ ಹಬ್ಬದ ಆಚರಣೆಯ ಮಹತ್ತ್ವವನ್ನು ಮಕ್ಕಳು ತಿಳಿಸಿದರು. ನಾಗರ ಪಂಚಮಿಯು ಭಾರತದ ಹಲವಾರು ಭಾಗಗಳಲ್ಲಿ ಹಿಂದೂಗಳು ಆಚರಿಸುವ ಒಂದು ಹಬ್ಬ. ಇದನ್ನು ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಆಚರಿಸಲಾಗುತ್ತದೆ. ಈ ದಿನದಂದು, ನಾಗ ದೇವತೆಯನ್ನು ಪೂಜಿಸಲಾಗುತ್ತದೆ. ಈ ಹಬ್ಬವು ಅಣ್ಣ, ತಂಗಿ ಇಬ್ಬರೂ ಸೇರಿ ಪೂಜಿಸಲ್ಪಡುವ ಹಬ್ಬವೆಂದು ಪ್ರತೀತಿ ಇದೆ ಎನ್ನುವ ಮಾಹಿತಿಯನ್ನು ವಿದ್ಯಾರ್ಥಿಗಳು ನೀಡಿದರು. ನಾಗರ ಪಂಚಮಿ ಕುರಿತ ಪೌರಾಣಿಕ ಕಥೆಗಳ ಉಲ್ಲೇಖ, ಸುಮಧುರವಾದ ಸಮೂಹ ಗೀತೆ, ಹಾಗೂ ಸುಂದರವಾದ ನೃತ್ಯದ ಮೂಲಕ ಮಕ್ಕಳು ಸಭಿಕರನ್ನು ರಂಜಿಸಿದರು.